Wednesday, 9th October 2024

ತೈಲ ಬೆಲೆ ಹೆಚ್ಚಳ: ಬೆಂಗಳೂರಿನಲ್ಲಿ ಪೆಟ್ರೋಲ್ ರು. 90.22

ನವದೆಹಲಿ: ಪೆಟ್ರೋಲ್ ರೀಟೇಲ್ ದರ ದೆಹಲಿಯಲ್ಲಿ ಮಂಗಳವಾರ ಹೊಸ ಎತ್ತರಕ್ಕೆ ಏರಿಕೆ. ತೈಲ ಮಾರ್ಕೆಟಿಂಗ್ ಕಂಪೆನಿಗಳು ಲೀಟರ್ ಪೆಟ್ರೋಲ್ ದರ 35 ಪೈಸೆ ಹೆಚ್ಚಳ ಮಾಡಿದ್ದು, ರು. 87.30ರಲ್ಲಿ ಇದೆ. ಇನ್ನು ಡೀಸೆಲ್ ಕೂಡ ಲೀಟರ್ ಗೆ 35 ಪೈಸೆ ಏರಿಕೆ ಮಾಡಲಾಗಿದ್ದು, ದೆಹಲಿಯಲ್ಲಿ ರು. 77.48 ಇದೆ.

ಮುಂಬೈನಲ್ಲೂ ಪೆಟ್ರೋಲ್- ಡೀಸೆಲ್ ದರವು ದಾಖಲೆ ಎತ್ತರಕ್ಕೆ ಏರಿದ್ದು, ಪೆಟ್ರೋಲ್ ರು. 93.83 ಮತ್ತು ಡೀಸೆಲ್ ರು. 84.36 ಇದೆ. ಇನ್ನು ಬೆಂಗಳೂರಿನಲ್ಲಿ ಪೆಟ್ರೋಲ್ ರು. 90.22 ಮತ್ತು ಡೀಸೆಲ್ ರು. 82.13 ಇದೆ.

ಅಂತರರಾಷ್ಟ್ರೀಯ ಬೆಂಚ್ ಮಾರ್ಕ್ ದರ ಹಾಗೂ ವಿದೇಶಿ ವಿನಿಯಮಯ ದರ ಅವಲಂಬಿಸಿ ಪೆಟ್ರೋಲ್, ಡೀಸೆಲ್ ದರ ಪ್ರತಿ ದಿನ ಪರಿಷ್ಕರಣೆ ಆಗುತ್ತದೆ. ಜಾಗತಿಕ ಮಟ್ಟದ ತೈಲ ದರವು ಇಂದು ಹದಿಮೂರು ತಿಂಗಳ ಗರಿಷ್ಠ ಮಟ್ಟವನ್ನು ಮುಟ್ಟಿದೆ. ತೈಲಕ್ಕೆ ಮತ್ತೆ ಬೇಡಿಕೆ ಕುದುರಿರುವುದು ಮತ್ತು ಎನರ್ಜಿ ಮಾರ್ಕೆಟ್ ಬೆಂಬಲದಿಂದ ಈ ಬೆಳವಣಿಗೆ ಆಗಿದೆ.

ಕೋವಿಡ್ ನಲ್ಲಿ ಲಸಿಕೆ ಪರಿಣಾಮಕಾರಿ ಎನಿಸುತ್ತಿದ್ದಂತೆ ಹಾಗೂ ಡಾಲರ್ ಮೌಲ್ಯ ದುರ್ಬಲ ಆಗುತ್ತಿದ್ದಂತೆ ತೈಲ ಬೆಲೆ ಏರಿಕೆಗೆ ಇನ್ನಷ್ಟು ಕಾರಣ ಆಗಿದೆ.

ಮೆಟ್ರೋ ನಗರಗಳಲ್ಲಿ ಪೆಟ್ರೋಲ್- ಡೀಸೆಲ್ ದರ ಹೀಗಿದೆ:

ದೆಹಲಿ: 87.30- 77.48

ಮುಂಬೈ: 93.83- 84.36

ಕೋಲ್ಕತ್ತಾ: 88.63- 81.06

ಚೆನ್ನೈ: 89.70, 82.66