Friday, 20th September 2024

PM Modi Brunei Visit : ಬ್ರೂನೈನ ಐತಿಹಾಸಿಕ ಮಸೀದಿಗೆ ಭೇಟಿ ನೀಡಿದ ಪ್ರಧಾನಿ ಮೋದಿ

PM Modi Brunei Visi

ನವದೆಹಲಿ: ಎರಡು ದಿನಗಳ ಭೇಟಿಗಾಗಿ ಬ್ರೂನೈಗೆ ತೆರಳಿರುವ ಪ್ರಧಾನಿ ನರೇಂದ್ರ ಮೋದಿ (PM Modi Brunei Visit) ಅವರು ಮಂಗಳವಾರ ಅಲ್ಲಿನ ಪ್ರಸಿದ್ಧ ಒಮರ್ ಅಲಿ ಸೈಫುದ್ದೀನ್ ಮಸೀದಿಗೆ ಭೇಟಿ ನೀಡಿದರು. ಅವರ ಬ್ರೂನೈ ದೇಶದ ಭೇಟಿಯು ಉಭಯ ರಾಷ್ಟ್ರಗಳ ನಡುವಿನ ದ್ವಿಪಕ್ಷೀಯ ಸಂಬಂಧ ವೃದ್ಧಿಯ ಗುರಿ ಹೊಂದಿದೆ.  ಈ ವೇಳೆ ಪ್ರಧಾನಿ ಮೋದಿ ಆ ಪ್ರದೇಶದ  ಅಪ್ರತಿಮ ರಚನೆಗಳಲ್ಲಿ ಒಂದೆಂದು ಪರಿಗಣಿಸಲಾದ ಮಸೀದಿಗೆ  ಭೇಟಿ ನೀಡಿದರು. ಅದಕ್ಕಿಂತ ಮೊದಲು  ಅಲ್ಲಿ ಅವರು ಭಾರತೀಯ ಹೈಕಮಿಷನ್‌ಮ ಹೊಸ ಚಾನ್ಸರಿ ಕಟ್ಟಡವನ್ನು ಉದ್ಘಾಟಿಸಿದರು.

ಒಮರ್ ಅಲಿ ಸೈಫುದ್ದೀನ್ ಮಸೀದಿಗೆ ಬ್ರೂನೈನ 28 ನೇ ಸುಲ್ತಾನ್ ಅವರ ಹೆಸರನ್ನು ಇಡಲಾಗಿದೆ. ಪ್ರಸ್ತುತ ಸುಲ್ತಾನ್ ಹಾಜಿ ಹಸನಾಲ್ ಬೋಲ್ಕಿಯಾ ಅವರ ತಂದೆ ಆಧುನಿಕ ಬ್ರೂನೈನ ವಾಸ್ತುಶಿಲ್ಪಿ ಎಂದು ಹೇಳಲಾಗಿದೆ. ಮಸೀದಿ ಭೇಟಿ ವೇಳೆ ಬೃಹತ್‌ ಸಂಖ್ಯೆಯಲ್ಲಿ ನೆರೆದಿದ್ದ ಸ್ಥಳೀಯ ಅಧಿಕಾರಿಗಳು, ವಿದ್ವಾಂಸರು ಮತ್ತು ಭಾರತೀಯ ಸಮುದಾಯದ ಸದಸ್ಯರೊಂದಿಗೆ ಪಿಎಂ ಮೋದಿ ಸಂವಾದ ನಡೆಸಿದರು.

ಬ್ರೂನೈನಲ್ಲಿರುವ  ಭಾರತೀಯ ಹೈಕಮಿಷನ್ ನ ಹೊಸ ಚಾನ್ಸರಿಯನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಭಾರತೀಯ ಸಮುದಾಯದ ಸದಸ್ಯರು ಉತ್ಸಾಹಭರಿತ ಸ್ವಾಗತದ ನಡುವೆ ಉದ್ಘಾಟಿಸಿದರು. ಜಲನ್ ದುಟಾ ರಾಜತಾಂತ್ರಿಕ ಎನ್‌ಕ್ಲೇವ್‌ನಲ್ಲಿ ಹೊಸ ಕಟ್ಟಡವು ಬಂದರ್ ಸೆರಿ ಬೆಗವಾನ್‌ನಲ್ಲಿರುವ ಅಮೆರಿಕ ರಾಯಭಾರ ಕಚೇರಿಯ ಪಕ್ಕದಲ್ಲಿದೆ.

ಈ ಸುದ್ದಿಯನ್ನೂ ಓದಿ: Buldozer Justice : ಯೋಗಿ ಆದಿತ್ಯನಾಥ್‌ ಬುಲ್ಡೋಜರ್‌ ನ್ಯಾಯದ ಅಫಿಡವಿಟ್‌ಗೆ ಸುಪ್ರೀಂ ಕೋರ್ಟ್‌ ತೃಪ್ತಿ

ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ (ಎನ್ಎಸ್ಎ) ಅಜಿತ್ ದೋವಲ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಉದ್ಘಾಟನೆಯ ನಂತರ, ಪ್ರಧಾನಿ ಕಚೇರಿ ಹೇಳಿಕೆ ಬಿಡುಗಡೆ ಮಾಡಿದ್ದು, “ಚಾನ್ಸರಿ ಸಂಕೀರ್ಣವು ಭಾರತೀಯತೆಯ ಆಳ ಪ್ರಜ್ಞೆಗೆ ಸಾಕ್ಷಿಯಾಗಿದೆ. ಸಾಂಪ್ರದಾಯಿಕ ಲಕ್ಷಣಗಳು ಮತ್ತು ಸೊಂಪಾದ ಹರಿಸಿನ ನಡುವೆ ಇದೆ. ಸೊಗಸಾದ ಕ್ಲಾಡಿಂಗ್ ಗಳು ಮತ್ತು ಬಾಳಿಕೆ ಬರುವ ಕೋಟಾ ಕಲ್ಲುಗಳ ಬಳಕೆಯು ಕ್ಲಾಸಿಕ್ ಮತ್ತು ಸಮಕಾಲೀನವಾಗಿದ್ದು. ಅದರ  ಆಕರ್ಷಣೆಯನ್ನು ಮತ್ತಷ್ಟು ಹೆಚ್ಚಿಸುತ್ತದೆ. ಈ ವಿನ್ಯಾಸವು ಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆಗೆ ಗೌರವ ಸಲ್ಲಿಸುವುದಲ್ಲದೆ, ಶಾಂತಿಯುತ ಮತ್ತು ಆಹ್ಲಾದಕರ ವಾತಾವರಣವನ್ನು ಸೃಷ್ಟಿಸುತ್ತದೆ ಎಂದು ಹೇಳಿದೆ.

ಸುಲ್ತಾನ್ ಹಾಜಿ ಹಸನಾಲ್ ಬೋಲ್ಕಿಯಾ ಅವರ ಆಹ್ವಾನದ ಮೇರೆಗೆ ಆಗ್ನೇಯ ಏಷ್ಯಾ ರಾಷ್ಟ್ರಕ್ಕೆ ಭಾರತೀಯ ಪ್ರಧಾನಿಯೊಬ್ಬರು ಕೈಗೊಂಡ ಮೊದಲ ಭೇಟಿ ಇದಾಗಿದೆ.  ಎರಡು ದಿನಗಳ ಭೇಟಿಯನ್ನು ಪ್ರಾರಂಭಿಸಿದ ಪ್ರಧಾನಿ ಮೋದಿ ಮಂಗಳವಾರ ಮಧ್ಯಾಹ್ನ ಬಂದರ್ ಸೆರಿ ಬೆಗವಾನ್ ವಿಮಾನ ನಿಲ್ದಾಣದಲ್ಲಿ ಇಳಿದಿದ್ದರು.  ಪ್ರಧಾನಮಂತ್ರಿಯವರ ಐತಿಹಾಸಿಕ ಭೇಟಿಯು ಭಾರತ ಮತ್ತು ಬ್ರೂನೈ ನಡುವೆ ರಾಜತಾಂತ್ರಿಕ ಸಂಬಂಧಗಳ ಸ್ಥಾಪನೆಯ 40 ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಏರ್ಪಡಿಸಲಾಗಿದೆ.