Sunday, 6th October 2024

ನೌಶೇರಾ ಸೆಕ್ಟರ್‌ನಲ್ಲಿ ಪ್ರಧಾನಿ ಸೇನಾ ಯೋಧರೊಂದಿಗೆ ದೀಪಾವಳಿ ಆಚರಣೆ

ನವದೆಹಲಿ: ಪ್ರತಿ ವರ್ಷದಂತೆ ಈ ವರ್ಷವೂ ಯೋಧರೊಂದಿಗೆ ದೀಪಾವಳಿ ಆಚರಿಸುತ್ತಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು, ಗುರುವಾರ ಜಮ್ಮು ಮತ್ತು ಕಾಶ್ಮೀರದ ನೌಶೇರಾ ಸೆಕ್ಟರ್‌ನಲ್ಲಿರುವ ಸೇನಾ ಯೋಧರನ್ನು ಭೇಟಿಯಾದರು.

ನೌಶೇರಾ ಸೇನಾ ಸೆಕ್ಟರ್ ನಲ್ಲಿ ಸೇನಾ ಸಿಬ್ಬಂದಿಯೊಂದಿಗೆ ಪ್ರಧಾನಿ ನರೇಂದ್ರ ಮೋದಿ ಹಬ್ಬದ ದಿನವನ್ನು ಕಳೆದರು.

ದೀಪಾವಳಿ ಅಂಗವಾಗಿ ಪ್ರಧಾನಿಯವರು ಭೇಟಿ ನೀಡಿರುವ ಫೋಟೊಗಳನ್ನು ಅಧಿಕೃತ ಮೂಲ ಗಳು ನೌಶೇರಾದ ಸೇನಾ ಪೋಸ್ಟ್‌ನಲ್ಲಿ ಹಂಚಿಕೊಂಡಿವೆ.

ಕೇಂದ್ರಾಡಳಿತ ಪ್ರದೇಶವಾದ ಜಮ್ಮು ಮತ್ತು ಕಾಶ್ರೀರದ ಈ ಗಡಿ ಪ್ರದೇಶದಲ್ಲಿ ಇತ್ತೀಚೆಗೆ ಸೇನೆ ಮತ್ತು ಭಯೋತ್ಪಾದಕರ ನಡುವೆ ಗುಂಡಿನ ಚಕಮಕಿಗೆ ಸಾಕ್ಷಿಯಾಗಿತ್ತು.

ಕಳೆದ ವರ್ಷ ಪ್ರಧಾನಿ ಮೋದಿ ಅವರು ಸೈನಿಕರೊಂದಿಗೆ ದೀಪಾವಳಿ ಆಚರಣೆಗಾಗಿ ರಾಜ ಸ್ಥಾನದ ಗಡಿ ಪ್ರದೇಶಗಳಿಗೆ ಭೇಟಿ ನೀಡಿದ್ದರು. ಜೈಸಲ್ಮೇರ್ʼನ ಲಾಂಗೆವಾಲಾಗೆ ಭೇಟಿ ನೀಡಿದ್ದ ಅವ್ರು ಯೋಧರನ್ನು ಶ್ಲಾಘಿಸಿ, ಸೈನಿಕರ ಶಕ್ತಿ ಮತ್ತು ಶೌರ್ಯದ ಬಗ್ಗೆ ದೇಶ ಹೆಮ್ಮೆ ಪಡುತ್ತದೆ ಎಂದು ಹೇಳಿದ್ದರು.