Friday, 13th December 2024

ಮಹಾರಾಷ್ಟ್ರ ಘಟನೆ: ಪ್ರಧಾನಿ ಮೋದಿ ಸಂತಾಪ

ಮಹಾರಾಷ್ಟ್ರ: ಭೀಕರ ಅಗ್ನಿ ದುರಂತದಲ್ಲಿ ಹತ್ತು ಮಕ್ಕಳು ಸಜೀವ ದಹನವಾಗಿದ್ದು, ಪ್ರಧಾನಿ ಮೋದಿ ಟ್ವಿಟರ್​ನಲ್ಲಿ ಸಂತಾಪ ಸೂಚಿಸಿದ್ದಾರೆ.

ಈ ಕುರಿತು ಟ್ವೀಟ್‌ ಮಾಡಿದ ಪ್ರಧಾನಿ ಮೋದಿ, ‘ಮಹಾರಾಷ್ಟ್ರದ ಭಂಡಾರಾ ದಲ್ಲಿ ಹೃದಯ ಕದಡುವ ದುರಂತ ನಡೆದು ಹೋಗಿದೆ. ನಾವು ಅಮೂಲ್ಯವಾದ ಯುವ ಜೀವಗಳನ್ನು ಕಳೆದುಕೊಂಡಿದ್ದೇವೆ.

ಎಲ್ಲಾ ದುಃಖಿತ ಕುಟುಂಬಗಳೊಂದಿಗೆ ನಾನಿದ್ದೇನೆ. ಗಾಯ ಗೊಂಡವರು ಆದಷ್ಟು ಬೇಗ ಚೇತರಿಸಿಕೊಳ್ಳುತ್ತಾರೆ ಎಂದು ನಾನು ಭಾವಿಸುತ್ತೇನೆ’ ಎಂದಿದ್ದಾರೆ.