Wednesday, 11th December 2024

ವಿಜಯ್ ದಿವಸ್ ಅಂಗವಾಗಿ ಶ್ರದ್ಧಾಂಜಲಿ ಸಲ್ಲಿಸಿದ ಪ್ರಧಾನಿ

ನವದೆಹಲಿ: ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿ ‘ವಿಜಯ್ ದಿವಸ್ ಅಂಗವಾಗಿ ಬುಧವಾರ ಪ್ರಧಾನಿ ನರೇಂದ್ರ ಮೋದಿ ಅವರು ಶ್ರದ್ಧಾಂಜಲಿ ಸಲ್ಲಿಸಿದರು.

ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಗೃಹ ಸಚಿವ ಅಮಿತ್ ಶಾ ಅವರು ಬುಧವಾರ ದೇಶವಾಸಿಗಳಿಗೆ ‘ವಿಜಯ್ ದಿವಸ್ ಶುಭಾಶಯ ಕೋರಿದರು. ಭಾರತೀಯ ಸೇನೆಯ ಶೌರ್ಯ ಮತ್ತು ಸಾಹಸಗಳಿಗೆ ಸಚಿವರು ಗಳು ನಮನ ಗಳನ್ನು ವ್ಯಕ್ತಪಡಿಸಿದರು. 1971ರ ಭಾರತ-ಪಾಕಿಸ್ತಾನ ಯುದ್ಧದ ಸುವರ್ಣ ಮಹೋತ್ಸವದ ನೆನಪಿಗಾಗಿ ಇಡೀ ವರ್ಷವನ್ನು ‘ಸ್ವರ್ಣವಿಜಯ ವರ್ಷ’ ಎಂದು ಆಚರಿಸಲಾಗುತ್ತದೆ.

1971ರ ಯುದ್ಧದಲ್ಲಿ ಹೊಸ ಸಾಹಸ ವನ್ನು ಬರೆದ ನಮ್ಮ ಸೈನಿಕರ ಶೌರ್ಯವನ್ನು ನಾನು ಸ್ಮರಿಸುತ್ತೇನೆ. ಅವರ ತ್ಯಾಗ ಎಲ್ಲ ಭಾರತೀಯರಿಗೂ ಸ್ಫೂರ್ತಿದಾಯಕ. ರಾಷ್ಟ್ರವು ಅವರನ್ನು ಸದಾ ಗೌರವಿಸಲಿದೆ’ ಎಂದು ಸಿಂಗ್ ಟ್ವಿಟರ್ ನಲ್ಲಿ ಹೇಳಿದ್ದಾರೆ.