Sunday, 13th October 2024

PMAY-G ಆವಾಸ ಯೋಜನಾ ಮೊದಲನೇ ಕಂತು 700 ಕೋಟಿ ರೂ. ಇಂದು ಬಿಡುಗಡೆ

ನವದೆಹಲಿ: ಪ್ರಧಾನಮಂತ್ರಿ ಗ್ರಾಮೀಣ್ ಆವಾಸ ಯೋಜನಾ ಮೊದಲನೇ ಕಂತು 700 ಕೋಟಿ ರೂಪಾಯಿಯನ್ನು ಭಾನುವಾರ ಪ್ರಧಾನಿ ನರೇಂದ್ರ ಮೋದಿ ಬಿಡುಗಡೆ ಮಾಡ ಲಿದ್ದಾರೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ನ.14ನೇ ತಾರೀಕಿನ ಭಾನುವಾರ ಮಧ್ಯಾಹ್ನ ಪ್ರಧಾನ್ ಮಂತ್ರಿ ಆವಾಸ್ ಯೋಜನಾ- ಗ್ರಾಮೀಣ್ ಮೊದಲ ಕಂತನ್ನು ತ್ರಿಪುರಾದಲ್ಲಿ 1.47 ಲಕ್ಷ ಫಲಾನುಭವಿಗಳಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಬಿಡುಗಡೆ ಮಾಡಲಿದ್ದಾರೆ ಎಂದು ಪ್ರಧಾನಮಂತ್ರಿ ಕಾರ್ಯಾಲಯವು ಮಾಹಿತಿ ನೀಡಿದೆ.

700 ಕೋಟಿ ರೂಪಾಯಿಗೂ ಹೆಚ್ಚು ಮೊತ್ತವನ್ನು ಈ ಸಂದರ್ಭದಲ್ಲಿ ಫಲಾನುಭವಿಗಳ ಖಾತೆಗೆ ನೇರವಾಗಿ ಜಮೆ ಮಾಡಲಾಗು ವುದು ಎಂದು ತಿಳಿಸಲಾಗಿದೆ.

“ಕಚ್ಚಾ” ಮನೆಗಳಲ್ಲಿ ವಾಸವಾಗಿರುವ ಫಲಾನುಭವಿಗಳು “ಪಕ್ಕಾ” ಮನೆಗಳನ್ನು ನಿರ್ಮಿ ಸಲು ನೆರವು ದೊರೆಯುತ್ತದೆ. ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವರು ಹಾಗೂ ತ್ರಿಪುರಾದ ಮುಖ್ಯಮಂತ್ರಿ ಈ ಕಾರ್ಯಕ್ರಮದ ವೇಳೆ ಹಾಜರಿರುತ್ತಾರೆ.