Friday, 13th December 2024

ಗೋಶಾಲೆಯಲ್ಲಿ ಶಂಕಿತ ವಿಷಾಹಾರ ಸೇವನೆ: 78 ಹಸುಗಳ ಸಾವು

ಜೈಪುರ: ರಾಜಸ್ಥಾನದ ಸರ್ಕಾರಿ ಅನುದಾನಿತ ಗೋಶಾಲೆಯಲ್ಲಿ ಶಂಕಿತ ವಿಷಾಹಾರ ಸೇವನೆಯಿಂದಾಗಿ 78 ಹಸುಗಳ ಸಾವನ್ನ ಪ್ಪಿವೆ.

ರಾಜಸ್ಥಾನದ ಚುರು ಜಿಲ್ಲೆಯಲ್ಲಿರುವ ಸರ್ಕಾರಿ ಅನುದಾನಿತ ಗೋಶಾಲೆಯಲ್ಲಿ ದುರಂತ ಸಂಭವಿಸಿದ್ದು, ಕಳೆದ 24 ಗಂಟೆಗಳ ಅವಧಿಯಲ್ಲಿ 78 ಹಸುಗಳು ಸಾವನ್ನಪ್ಪಿವೆ. ವಿಚಾರ ತಿಳಿಯುತ್ತಿದ್ದಂತೆಯೇ ಸ್ಥಳಕ್ಕಾಗಮಿಸಿದ ರಾಜಸ್ಥಾನದ ಪಶುಸಂಗೋಪನಾ ಅಧಿಕಾರಿಗಳು, ಪರಿಶೀಲನೆ ನಡೆಸಿದ್ದು, ಮೇಲ್ನೋಟಕ್ಕೆ ಹಸುಗಳ ಸಾವಿಗೆ ವಿಷಾಹಾರ ಕಾರಣ ಎಂದು ಶಂಕಿಸಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿರುವ ರಾಜಸ್ಥಾನ ಪಶುಸಂಗೋಪನಾ ಇಲಾಖೆಯ ಜಂಟಿ ನಿರ್ದೇಶಕ ಡಾ.ಜಗದೀಶ್ ಅವರು, ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲು ತಂಡ ರಚನೆ ಮಾಡಲಾಗಿದೆ. ರಾಜಸ್ಥಾನದ ಸರ್ದರ್ಶಹರ್‌ನ ಬಿಲ್ಯುಬಾಸ್ ರಾಂಪುರ ಗ್ರಾಮ ದಲ್ಲಿರುವ ಗೋಶಾಲೆಗೆ ಈ ತಂಡವನ್ನು ರವಾನೆ ಮಾಡಲಾಗಿದೆ.

ಅಂತೆಯೇ, ಹಸಗಳು ತಿಂದ ಆಹಾರವನ್ನು ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಹೇಳಿದ್ದಾರೆ.