Wednesday, 11th December 2024

6 ತಿಂಗಳೊಳಗೆ ಪಾಕ್‌ ಆಕ್ರಮಿತ ಕಾಶೀರ ಭಾರತದ ಭಾಗವಾಗಲಿದೆ: ಯೋಗಿ ಆದಿತ್ಯನಾಥ್‌

ಪಾಲ್ಘರ್‌: ನರೇಂದ್ರ ಮೋದಿ ಅವರು ಮೂರನೇ ಅವಧಿಗೆ ಪ್ರಧಾನಿಯಾದರೆ 6 ತಿಂಗಳೊಳಗೆ ಪಾಕ್‌ ಆಕ್ರಮಿತ ಕಾಶೀರವು ಭಾರತದ ಭಾಗವಾಗಲಿದೆ ಎಂದು ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಭರವಸೆ ನೀಡಿದ್ದಾರೆ.

ಪಾಕಿಸ್ತಾನಕ್ಕೆ ಪಾಕ್‌ ಆಕ್ರಮಿತ ಕಾಶೀರವನ್ನು ಉಳಿಸುವುದು ಕಷ್ಟಕರವಾಗಿದೆ. ಇಂತಹ ಕೆಲಸಕ್ಕೆ ಧೈರ್ಯ ಬೇಕು. ಇದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ಆಯ್ಕೆಯಾಗಬೇಕು ಎಂದರು.

ಕಳೆದ ಮೂರು ವರ್ಷಗಳಲ್ಲಿ ಪಾಕಿಸ್ತಾನದಲ್ಲಿ ಅನೇಕ ಭಯೋತ್ಪಾದಕರು ಹತರಾಗಿದ್ದಾರೆ. ಅದರ ಹಿಂದೆ ಭಾರತೀಯ ಏಜೆನ್ಸಿಗಳು ಇವೆ ಎಂದು ಬ್ರಿಟಿಷ್‌ ದೊಡ್ಡ ಪತ್ರಿಕೆ ಬರೆದಿದೆ. ನಾವು ನಮ್ಮ ಜನರನ್ನು ಯಾರಾದರೂ ಕೊಂದರೆ ನಾವು ಅವರನ್ನು ಪೂಜಿಸುವುದಿಲ್ಲ ಆದರೆ ಅವರಿಗೆ ಅರ್ಹವಾದ ಉತ್ತರ ವನ್ನು ನೀಡುತ್ತೇವೆ ಎಂದರು.

ಭಾರತದ ಮಹಾನ್‌ ಪುರುಷರನ್ನು ಗೌರವಿಸಬೇಕು. ಪ್ರತಿ ಹೆಣ್ಣು ಮಗಳಿಗೂ ಸಂಪೂರ್ಣ ಭದ್ರತೆ ನೀಡಬೇಕು. ಪ್ರತಿಯೊಬ್ಬ ಉದ್ಯಮಿಗಳಿಗೆ ರಕ್ಷಣೆ ನೀಡಬೇಕು. ಪ್ರತಿಯೊಬ್ಬ ಯುವಕರಿಗೆ ಉದ್ಯೋಗ ಒದಗಿಸಬೇಕು ಎಂದು ಸಿಎಂ ಯೋಗಿ ಹೇಳಿದ್ದಾರೆ.