Wednesday, 11th December 2024

ಮುಂಬೈನಾದ್ಯಂತ ವಿದ್ಯುತ್​ ಸಂಪರ್ಕ ಕಡಿತ

ಮುಂಬೈ: ವಾಣಿಜ್ಯ ನಗರಿ ಮುಂಬೈನಾದ್ಯಂತ ವಿದ್ಯುತ್​ ಸಂಪರ್ಕ ಕಡಿತಗೊಂಡಿರುವುದಾಗಿ ಸೋಮವಾರ ವರದಿಯಾಗಿದೆ. ಮುಂಬೈನ ದಕ್ಷಿಣ, ಉತ್ತರ ಮತ್ತು ಕೇಂದ್ರದಲ್ಲಿ ಎಲ್ಲಿಯೂ ವಿದ್ಯುತ್​ ಇಲ್ಲದಿರುವ ಬಗ್ಗೆ ಜನರು ಟ್ವಿಟರ್​ ಮೂಲಕ ದೂರಿಕೊಂಡಿ ದ್ದಾರೆ.

ಇದಕ್ಕೆ ಟ್ವೀಟ್​ ಮೂಲಕವೇ ಸ್ಪಷ್ಟನೆ ನೀಡಿರುವ ಬೃಹನ್​ ಮುಂಬೈ ವಿದ್ಯುತ್​ ಸರಬರಾಜು ಮತ್ತು ಸಾರಿಗೆ (ಬಿಎಸ್​ಇಟಿ) ಇಲಾಖೆ, ಟಾಟಾ ಸಂಸ್ಥೆಯಿಂದ ಪೂರೈಕೆಯಾಗುವ ವಿದ್ಯುತ್​ ಸರಬರಾಜಿನಲ್ಲಿ ವೈಫಲ್ಯವಾಗಿರುವುದರಿಂದ ಸಂಪರ್ಕ ಕಡಿತವಾಗಿದೆ ಎಂದು ತಿಳಿಸಿದೆ.

ವಿದ್ಯುತ್​ ಕಡಿತ ಹೊರತಾಗಿಯೂ ಬಾಂಬೆ ಸ್ಟಾಕ್​ ಎಕ್ಸ್​ಚೇಂಜ್​ (ಬಿಎಸ್​ಇ) ಎಂದಿನಂತೆಯೇ ಕಾರ್ಯನಿರ್ವಹಿಸುತ್ತಿದೆ ಎಂದು ಎಕ್ಸ್​ಚೇಂಜ್​ ಹೇಳಿದೆ.