Wednesday, 11th December 2024

ಎನ್‌ಐಎ ವಿಚಾರಣೆಗೆ ಪ್ರಗ್ಯಾ ಸಿಂಗ್ ಠಾಕೂರ್ ಹಾಜರು

ಮುಂಬೈ: ಮಾಲೆಗಾಂವ್ ಸ್ಪೋಟ ಪ್ರಕರಣಕ್ಕೆ ಕುರಿತಂತೆ, ಬಿಜೆಪಿ ಸಂಸದೆ ಪ್ರಗ್ಯಾ ಸಿಂಗ್ ಠಾಕೂರ್ ಸೋಮವಾರ ರಾಷ್ಟ್ರೀಯ ತನಿಖಾ ದಳದ ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆಗೆ ಹಾಜರಾದರು.

ಪ್ರಗ್ಯಾ ಸೇರಿದಂತೆ ಇತರೆ ನಾಲ್ವರು ಆರೋಪಿಗಳಾದ ಲೆ.ಕನರ್ಲ್ ಪ್ರಸಾದ್ ಪುರೋಹಿತ್, ಸಮೀರ್ ಕುಲಕರ್ಣಿ, ರಮೇಶ್ ಉಪಾಧ್ಯಾಯ್ ಮತ್ತು ಸುಧಾಕರ್ ಚತುರ್ವೇದಿ ನ್ಯಾಯಾಲಯಕ್ಕೆ ಹಾಜರಾದರು. ಇನ್ನಿಬ್ಬರು ಆರೋಪಿಗಳಾದ ಅಜಯ್ ರಹಿರ್ಕಾರ್ ಮತ್ತು ಸುಧಾಕರ್ ದ್ವಿವೇದಿ ಗೈರಾಗಿದ್ದರು.

ಆರೋಪಿ ದ್ವಿವೇದಿ ಗೈರಾದ ಕಾರಣ, ಸಾಕ್ಷ್ಯಿದಾರರ ವಿಚಾರಣೆ ನಡೆಸಲು ವಕೀಲರಿಗೆ ಸಾಧ್ಯವಾಗಲಿಲ್ಲ. ನ್ಯಾಯಾಲಯ ಪ್ರಕರಣದ ವಿಚಾರಣೆಯನ್ನು ಮಂಗಳವಾರಕ್ಕೆ ಮುಂದೂಡಿತು.

ಡಿಸೆಂಬರ್ 19, 2020 ರಂದು ವಿಶೇಷ ನ್ಯಾಯಾಧೀಶ ಪಿ ಆರ್ ಸಿತ್ರೆ ಅವರು ಠಾಕೂರ್ ಅವರಿಗೆ ನ್ಯಾಯಾಲಯಕ್ಕೆ ಹಾಜರಾಗಲು ‘ಕೊನೆಯ ಅವಕಾಶ’ ನೀಡಿದ್ದರು. ಇದೇ ವೇಳೆ ಪ್ರಗ್ಯಾ ಎರಡು ಬಾರಿ ನ್ಯಾಯಾಲಯಕ್ಕೆ ಹಾಜರಾಗಲು ವಿಫಲವಾದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು.