Friday, 13th December 2024

ಎಚ್‌ಡಿಎಫ್‌ಸಿ ಎಎಂಸಿಯ ಸಿಐಒ ಹುದ್ದೆಗೆ ಪ್ರಶಾಂತ್ ಜೈನ್ ರಾಜೀನಾಮೆ

ಮುಂಬೈ: ಇಕ್ವಿಟಿ ಫಂಡ್ ಮ್ಯಾನೇಜರ್ ಪ್ರಶಾಂತ್ ಜೈನ್ ಎಚ್‌ಡಿಎಫ್‌ಸಿ ಎಎಂಸಿಯ ಸಿಐಒ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.

19 ವರ್ಷಗಳ ಕಾಲ ಸಿಇಒ ಆಗಿ ಸೇವೆ ಸಲ್ಲಿಸಿದ ಪ್ರಶಾಂತ್ ಜೈನ್ ಈಗ ರಾಜೀನಾಮೆ ನೀಡಿದ್ದಾರೆ ಎಂದು ಎಚ್‌ಡಿಎಫ್‌ಸಿ ಎಎಂಸಿ  ಫೈಲಿಂಗ್‌ನಲ್ಲಿ ತಿಳಿಸಿದೆ. ಪ್ರಸ್ತುತ, ಎಚ್‌ಡಿಎಫ್‌ಸಿ ಎಂಎಫ್‌ನಲ್ಲಿ ಜೈನ್ ಫ್ಲೆಕ್ಸಿ ಕ್ಯಾಪ್ ಮತ್ತು ಟಾಪ್ 100 ಫಂಡ್‌ಅನ್ನು ನಿರ್ವಹಣೆ ಮಾಡುತ್ತಿದ್ದಾರೆ.

ಜೈನ್ ಐಐಟಿ ಕಾನ್ಪುರದಲ್ಲಿ ಇಂಜಿನಿಯರಿಂಗ್ ಪದವಿ, ಐಐಎಂ ಬೆಂಗಳೂರಿ ನಲ್ಲಿಇ ಎಂಬಿಎ ಪದವಿ ಪಡೆದಿದ್ದಾರೆ. ಬಳಿಕ ಎಸ್‌ಬಿಐ ಕ್ಯಾಪ್ಸ್‌ನಲ್ಲಿ ತನ್ನ ವೃತ್ತಿ ಜೀವನ ಆರಂಭ ಮಾಡಿದ್ದಾರೆ.

ನಿರ್ದೇಶಕರ ಮಂಡಳಿಯು ಚಿರಾಗ್ ಸೆಟಲ್ವಾಡ್‌ರನ್ನು ಈಕ್ವಿಟೀಸ್ ಮುಖ್ಯಸ್ಥರನ್ನಾಗಿ ಮತ್ತು ಶೋಭಿತ್ ಮೆಹ್ರೋತ್ರಾ ಅವರನ್ನು ಹೆಡ್-ಫಿಕ್ಸೆಡ್ ಇನ್‌ಕಮ್ ಆಗಿ ನೇಮಕ ಮಾಡಿದ್ದಾರೆ. ಸೆಟಲ್ವಾಡ್ ಮತ್ತು ಮೆಹ್ರೋತ್ರಾ ಇಬ್ಬರೂ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ನವನೀತ್ ಮುನೋಟ್‌ಗೆ ರಿಪೋರ್ಟ್ ಮಾಡಲಿದ್ದಾರೆ.

ಚಿರಾಗ್ ಸೆಟಲ್ವಾಡ್ ಕಂಪನಿಯ ಪ್ರಾರಂಭದಿಂದಲೂ ಹೂಡಿಕೆ ತಂಡಗಳ ಭಾಗವಾಗಿದ್ದಾರೆ. ಅಕ್ಟೋಬರ್ 2004 ರಿಂದ ಸುಮಾರು 2.5 ವರ್ಷಗಳ ಕಾಲ ಸಂಸ್ಥೆಯಿಂದ ಹೊರಗೆ ಉಳಿದಿದ್ದು ಬಳಿಕ ಮಾರ್ಚ್ 2007 ರಲ್ಲಿ ಮತ್ತೊಮ್ಮೆ ಕಂಪನಿಯನ್ನು ಸೇರ್ಪಡೆಯಾಗಿದ್ದಾರೆ. ದೀರ್ಘಕಾಲದವರೆಗೆ ಕೆಲವು ಇಕ್ವಿಟಿ ಯೋಜನೆಗಳನ್ನು ನಿರ್ವಹಣೆ ಮಾಡುತ್ತಿದ್ದಾರೆ.

ಮೆಹ್ರೋತ್ರಾ 18 ವರ್ಷಗಳಿಂದ ಕಂಪನಿಯಲ್ಲಿದ್ದಾರೆ. ಪ್ರಸ್ತುತ ಕೆಲವು ಫಿಕ್ಸಿಡ್ ಇನ್‌ಕಮ್ ಯೋಜನೆಯನ್ನು ನಿರ್ವಹಣೆ ಮಾಡುತ್ತಿದ್ದಾರೆ.