Saturday, 14th December 2024

24 ರಂದು ತಿರುಮಲಕ್ಕೆ ರಾಷ್ಟ್ರಪತಿ ರಾಮ್‍ನಾಥ್ ಕೋವಿಂದ್ ಭೇಟಿ

ಚಿತ್ತೂರು: ರಾಷ್ಟ್ರಪತಿ ರಾಮ್‍ನಾಥ್ ಕೋವಿಂದ್, ಆಂಧ್ರಪ್ರದೇಶ ರಾಜ್ಯಪಾಲ ಬಿಸ್ವಭೂಷಣ್ ಹರಿಚಂದನ್ ಮತ್ತು ಮುಖ್ಯ ಮಂತ್ರಿ ಜಗನ್‍ಮೋಹನ್‍ ರೆಡ್ಡಿ ಈ ತಿಂಗಳ 24 ರಂದು ತಿರುಮಲಕ್ಕೆ ಭೇಟಿ ನೀಡಲಿದ್ದಾರೆ.

ರಾಷ್ಟ್ರಪತಿ ಆಗಮನದ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣದಿಂದ ತಿರುಮಲ ದೇವಸ್ಥಾನದವರೆಗೆ ಭದ್ರತೆ ಬಿಗಿಗೊಳಿಸಲಾಗುತ್ತಿದೆ.

ರಾಷ್ಟ್ರಪತಿಯವರು ತಿರುಚನೂರು ಪದ್ಮಾವತಿ ಅಮ್ಮಾವರಿ ದೇವಸ್ಥಾನ, ತಿರುಮಲ ಪದ್ಮಾವತಿ ಅತಿಥಿಗೃಹ ಮತ್ತು ತಿರುಮಲ ಮುಖ್ಯ ದೇವಾಲಯಕ್ಕೆ ಭೇಟಿ ನೀಡಲಿದ್ದಾರೆ.