Friday, 13th December 2024

ಮೂರು ಕೃಷಿ ಮಸೂದೆಗೆ ಬಿತ್ತು ರಾಷ್ಟ್ರಪತಿಗಳ ಅಂಕಿತ

ನವದೆಹಲಿ : ಕಳೆದ ಸೆಪ್ಟೆಂಬರ್ 20ರಂದು ಸಂಸತ್ತಿನಲ್ಲಿ ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೂ ಕೇಂದ್ರ ಸರ್ಕಾರ ಮಂಡಿಸಿದಂತೆ ಮೂರು ಕೃಷಿ ಮಸೂದೆ ಅಂಗೀಕರಿಸಲ್ಪಟ್ಟಿತ್ತು. ಇಂತಹ ಮಸೂದೆಯನ್ನು ರಾಷ್ಟ್ರಪತಿಗಳ ಅಂಕಿತಕ್ಕೆ ಕಳುಹಿಸಲಾಗಿತ್ತು. ಇದೀಗ ವಿವಾದಿತ ಕೃಷಿ ಮಸೂದೆಗೆ ರಾಷ್ಟ್ರಪತಿಗಳು ಅಂಕಿತ ಹಾಕಿದ್ದಾರೆ.

ಈ ಮಸೂದೆಗಳ ತಿದ್ದುಪಡಿಗೆ ಪ್ರತಿಪಕ್ಷಗಳು ತೀವ್ರ ವಿರೋಧ ವ್ಯಕ್ತ ಪಡಿಸಿದ್ದವು. ಇದರ ಮಧ್ಯೆಯೂ ಮೂರು ಕೃಷಿ ಮಸೂಧೆ ಗಳಿಗೆ ಸಂಸತ್ ಅಂಕಿತ ಸೂಚಿಸಿತ್ತು.