Monday, 14th October 2024

ರಾಷ್ಟ್ರಪತಿ ಮುರ್ಮು’ಗೆ ಗ್ರ್ಯಾಂಡ್ ಆರ್ಡರ್ ಆಫ್ ದಿ ಚೈನ್ ಆಫ್ ದಿ ಯೆಲ್ಲೋ ಸ್ಟಾರ್ ಪ್ರಶಸ್ತಿ ಗೌರವ

ನವದೆಹಲಿ: ಸುರಿನೇಮ್​ ದೇಶ ತನ್ನ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ‘ಗ್ರ್ಯಾಂಡ್ ಆರ್ಡರ್ ಆಫ್ ದಿ ಚೈನ್ ಆಫ್ ದಿ ಯೆಲ್ಲೋ ಸ್ಟಾರ್’ ಅನ್ನು ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ನೀಡಿ ಗೌರವಿಸಿದೆ.

ಮುರ್ಮು ಅವರು ರಾಷ್ಟ್ರಪತಿಗಳಾದ ಬಳಿಕದ ಮೊದಲ ವಿದೇಶ ಪ್ರವಾಸವಾಗಿದೆ. ಜೂ. 4ರಿಂದ ಮೂರು ದಿನಗಳ ಪ್ರವಾಸದಲ್ಲಿರುವ ಅವರಿಗೆ ಸುರಿನೇಮ್​ನ ಅತ್ಯುನ್ನತ ಗೌರದ ಸಂದಿದೆ.

ದಕ್ಷಿಣ ಅಮೆರಿಕದ ಚಿಕ್ಕ ರಾಷ್ಟ್ರವಾದ ಸುರಿನೇಮ್​​ಗೆ ಭೇಟಿ ನೀಡಿರುವ ಮುರ್ಮು ಅವರನ್ನು ಅದ್ಧೂರಿಯಾಗಿ ಸ್ವಾಗತಿಸಲಾಗಿದೆ. ಇದೇ ವೇಳೆ, ಉಭಯ ದೇಶಗಳ ನಡುವೆ ಹಲವು ಒಪ್ಪಂದಗಳೂ ನಡೆದು ಅಧ್ಯಕ್ಷರು ಸಹಿ ಹಾಕಿ ದರು.

ಸುರಿನೇಮ್​ ಅತ್ಯುನ್ನತ ಗೌರವವನ್ನು ಪಡೆದ ಚಿತ್ರಗಳನ್ನು ರಾಷ್ಟ್ರಪತಿ ಟ್ವಿಟರ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ‘ಸುರಿನೇಮ್​ನ ಅತ್ಯುನ್ನತ ಪ್ರಶಸ್ತಿ ಯಾದ ಗ್ರ್ಯಾಂಡ್ ಆರ್ಡರ್ ಆಫ್ ದಿ ಚೈನ್ ಆಫ್ ದಿ ಯೆಲ್ಲೋ ಸ್ಟಾರ್ ಅನ್ನು ಸ್ವೀಕರಿಸಿರುವುದು ದೊಡ್ಡ ಗೌರವ ತಂದಿದೆ. ಈ ಮನ್ನಣೆಯು ನನಗೆ ಮಾತ್ರ ವಲ್ಲದೆ ನಾನು ಪ್ರತಿನಿಧಿಸುವ ಭಾರತದ 140 ಕೋಟಿ ಜನರಿಗೆ ಸಂದ ಗೌರವವಾಗಿದೆ ಎಂದು ಬರೆದುಕೊಂಡಿದ್ದಾರೆ.

ಸುರಿನೇಮ್​ಗೆ ಭಾರತೀಯರ ಆಗಮನದ 150 ನೇ ವಾರ್ಷಿಕೋತ್ಸವದ ವೇಳೆ ಈ ಗೌರವ ಸ್ವೀಕರಿಸಿರುವುದು ವಿಶೇಷವಾಗಿದೆ.

ರಾಷ್ಟ್ರಪತಿ ಮುರ್ಮು ಅವರ ಸುರಿನೇಮ್​ಗೆ ಮೂರು ದಿನಗಳ ಭೇಟಿ ನಾಳೆ ಮುಗಿಯಲಿದ್ದು, ಬಳಿಕ ಸರ್ಬಿಯಾಕ್ಕೆ ಪ್ರವಾಸ ಕೈಗೊಳ್ಳಲಿದ್ದಾರೆ. ಉಭಯ ರಾಷ್ಟ್ರಗಳ ಮುಖ್ಯಸ್ಥರು ಇದೇ ಮೊದಲ ಬಾರಿಗೆ ಭೇಟಿಯಾಗಲಿದ್ದಾರೆ.