Saturday, 14th December 2024

ಖಾದ್ಯ ತೈಲ, ಎಲೆಕ್ಟ್ರಾನಿಕ್ ವಸ್ತುಗಳ ದರ ಇಳಿಕೆ

ವದೆಹಲಿ: ಗೌರಿ ಗಣೇಶ ಹಬ್ಬ ಸಮೀಪಿಸುತ್ತಿರುವ ಹೊತ್ತಲ್ಲೇ ಖಾದ್ಯ ತೈಲ, ಆಹಾರ ಪದಾರ್ಥಗಳು, ಎಲೆಕ್ಟ್ರಾನಿಕ್ ವಸ್ತುಗಳ ದರ ಇಳಿಕೆಯಾಗಿದೆ.

ಖಾದ್ಯ ತೈಲದ ದರ ಶೇ.15 ರಿಂದ 20ರಷ್ಟು ಇಳಿಕೆಯಾಗಿದ್ದು, ಬಿಸ್ಕೆಟ್ ತರ ಶೇ.10 ರಿಂದ 15 ರಷ್ಟು ಇಳಿಕೆಯಾಗಿದೆ. ಉತ್ಪಾದನಾ ವೆಚ್ಚ ತಗ್ಗಿರುವುದು, ಕಚ್ಚಾ ವಸ್ತುಗಳ ಬೆಲೆ ಇಳಿಕೆಯಾಗಿರುವುದರಿಂದ ಎಲೆಕ್ಟ್ರಾನಿಕ್ ವಸ್ತುಗಳ ದರ ಕೂಡ ಕಡಿಮೆಯಾಗಿದೆ.

ಸ್ಯಾಮ್ಸಂಗ್, ಎಲ್.ಜಿ., ಸೋನಿ ಟಿವಿ ದರ ಶೇಕಡ 5 ರಿಂದ 8 ರಷ್ಟು ಇಳಿಕೆ ಯಾಗಿದೆ. ಲ್ಯಾಪ್ಟಾಪ್ ದರ 1500 ರೂ. ನಿಂದ 200 ರೂಪಾಯಿವರೆಗೆ ಕಡಿಮೆಯಾಗಿದ್ದು, ಸ್ಮಾರ್ಟ್ ಫೋನ್ ಗಳ ದರ ಶೇಕಡ 4 ರಿಂದ 5 ರಷ್ಟು ಕಡಿಮೆಯಾಗಿದೆ.