Saturday, 14th December 2024

ರಾಜ್ಯಸಭಾ ಸಂಸದನಾದಾಗಿನಿಂದ ಉಷಾ ಸ್ಕೂಲ್ ಆಫ್ ಅಥ್ಲೆಟಿಕ್ಸ್ ಗುರಿಯಾಗಿಸಲಾಗುತ್ತಿದೆ: ಪಿ.ಟಿ.ಉಷಾ

ವದೆಹಲಿ: ತಾವು ಸಂಸದರಾದಾಗಿನಿಂದಲೂ ತಮ್ಮನ್ನ ಟಾರ್ಗೇಟ್ ಮಾಡಲಾಗುತ್ತಿದೆ ಎಂದು ಭಾರತೀಯ ಒಲಿಂಪಿಕ್ ಸಂಸ್ಥೆ ಅಧ್ಯಕ್ಷೆ ಪಿ.ಟಿ.ಉಷಾ ಹೇಳಿದರು.

ಕೇರಳದ ಕೋಯಿಕ್ಕೋಡ್’ನಲ್ಲಿರುವ ‘ಉಷಾ ಸ್ಕೂಲ್ ಆಫ್ ಅಥ್ಲೆಟಿಕ್ಸ್’ ಭೂಮಿಯಲ್ಲಿ ಅಕ್ರಮ ಕಟ್ಟಡ ನಿರ್ಮಾಣದ ಬಗ್ಗೆ ನವದೆಹಲಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದರು.

‘ಇದು ಹುಡುಗಿಯರ ಸುರಕ್ಷತೆಯ ವಿಷಯ, ಹುಡುಗಿಯರ ಅನುಮತಿಯಿಲ್ಲದೇ ಯಾರಾ ದರೂ ಕ್ಯಾಂಪಸ್ಸಿಗೆ ಪ್ರವೇಶಿಸಲು ಹೇಗೆ ಸಾಧ್ಯ. ಅಕ್ರಮ ನಿರ್ಮಾಣವು ಪನಗರ್ ಪಂಚಾ ಯತ್ ಗಮನದಲ್ಲಿದೆ. ಅಲ್ಲಿ ತರಬೇತಿ ಪಡೆಯುವ ಬಾಲಕಿಯರು ಸೇರಿದಂತೆ ಇತರ ಕ್ರೀಡಾ ಪಟುಗಳ ಸುರಕ್ಷತೆಯನ್ನ ಖಚಿತಪಡಿಸಿಕೊಳ್ಳಬೇಕು. ಈ ವಿಷಯದಲ್ಲಿ ಮುಖ್ಯ ಮಂತ್ರಿಗಳು ಮಧ್ಯಪ್ರವೇಶಿಸಬೇಕು. ನಾನು ರಾಜ್ಯಸಭಾ ಸಂಸದನಾದಾಗಿನಿಂದ ಉಷಾ ಸ್ಕೂಲ್ ಆಫ್ ಅಥ್ಲೆಟಿಕ್ಸ್ ಗುರಿಯಾಗಿಸಲಾಗುತ್ತಿದೆ. ನನ್ನ ಮೇಲೆ ವೈಯಕ್ತಿಕ ದಾಳಿಗಳು ನಡೆಯುತ್ತಿವೆ. ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ’ ಎಂದು ಭಾವುಕರಾದರು.

ಜುಲೈ 6, 2022 ರಂದು, ಪಿಟಿ ಉಷಾ ಅವರನ್ನು ರಾಜ್ಯಸಭೆಗೆ ನಾಮನಿರ್ದೇಶನ ಮಾಡಲಾಯಿತು.