Thursday, 3rd October 2024

ಭಾರತದಲ್ಲಿ ಕಮ್ ಬ್ಯಾಕ್ ಮಾಡಲಿದೆ ಮೊಬೈಲ್ ಗೇಮ್ ’ಪಬ್ ಜಿ’

ನವದಹೆಲಿ: ದೇಶದಲ್ಲೆಲ್ಲ ದೀಪದ ಹಬ್ಬ ದೀಪಾವಳಿ ಆಚರಿಸಲು ಸಿದ್ದತೆ ನಡೆಯುತ್ತಿದೆ. ಅದರ ಜತೆಗೆ ಮೊಬೈಲ್ ಗೇಮ್ ಪ್ರಿಯರಲ್ಲಿ ಸಂತಸವನ್ನುಂಟು ಮಾಡಲು ಭಾರತದಲ್ಲಿ ಅಂಗಸಂಸ್ಥೆ ರಚನೆ ಹಾಗೂ ಹೊಸ ಗೇಮ್ ನೊಂದಿಗೆ ಭಾರತದ ಮಾರುಕಟ್ಟೆಗೆ ಕಮ್ ಬ್ಯಾಕ್ ಆಗುವುದಾಗಿ ಪಬ್ ಜಿ ಕಾರ್ಪೋರೇಷನ್ ಹೇಳಿದೆ.

ಇ-ಸ್ಪೋರ್ಟ್ಸ್, ಸ್ಥಳೀಯ ವಿಡಿಯೋ ಗೇಮ್, ಮನೋರಂಜನೆ ಮತ್ತು ಐಟಿ ಇಂಡಸ್ಟ್ರಿ ಉತ್ತೇಜನಕ್ಕಾಗಿ ಭಾರತದಲ್ಲಿ 100 ಮಿಲಿ ಯನ್ ಡಾಲರ್ ಹೂಡಿಕೆ ಮಾಡಲು ಯೋಜಿಸಿರುವುದಾಗಿ ಕಂಪನಿ ತಿಳಿಸಿದೆ.

ರಾಷ್ಟ್ರೀಯ ಸುರಕ್ಷತೆ ದೃಷ್ಟಿಯಿಂದ ಪಜ್’ಜಿ ಮೊಬೈಲ್ ಆಯಪ್ ಸೇರಿದಂತೆ, 118 ಚೀನಾದ ಕಂಪನಿಗಳನ್ನು ಭಾರತ ಸರ್ಕಾರ ಸೆಪ್ಟೆಂಬರ್ ತಿಂಗಳಿನಲ್ಲಿ ಬ್ಯಾನ್ ಮಾಡಿತ್ತು.

ಭಾರತದ ಮಾರುಕಟ್ಟೆಗಾಗಿ ವಿಶೇಷವಾಗಿ ಹೊಸ ಗೇಮ್ ಸೃಷ್ಟಿಯೊಂದಿಗೆ ಪಬ್ ಜಿ ಮೊಬೈಲ್ ಭಾರತ ಪರಿಚಯಿಸಲು ಸಿದ್ಧತೆ ನಡೆಸಲಾಗಿದೆ.

ಭಾರತೀಯ ಅಂಗಸಂಸ್ಥೆ, ವ್ಯಾಪಾರ, ಇ- ಸ್ಪೋರ್ಟ್ಸ್, ಮತ್ತು ಗೇಮ್ ಅಭಿವೃದ್ಧಿಗಾಗಿ 100 ನೌಕರರನ್ನು ನೇಮಿಸಿಕೊಳ್ಳಲಿದೆ ಎಂದು ತಿಳಿಸಿದೆ. ಆದರೆ, ಪಬ್ ಜಿ ಮೊಬೈಲ್ ಇಂಡಿಯಾ ಉದ್ಘಾಟನೆ ದಿನಾಂಕ ಇನ್ನೂ ಬಹಿರಂಗವಾಗಿಲ್ಲ.