Wednesday, 11th December 2024

ಪುದುಚೇರಿ: ಫೆ.22ರಂದು ವಿಶ್ವಾಸಮತ ಯಾಚನೆ

ಪುದುಚೇರಿ : ವಿಧಾನಸಭೆಯಲ್ಲಿ ಫೆ.22ರಂದು ವಿಶ್ವಾಸಮತ ಯಾಚನೆಗೆ ಪುದುಚೇರಿ ರಾಜ್ಯಪಾಲರ ಆದೇಶಿಸಿದ್ದಾರೆ. ಈ ಮೂಲಕ ಕಾಂಗ್ರೆಸ್ ಆಡಳಿತವಿರುವ ಕೇಂದ್ರಾಡಳಿತ ಪ್ರದೇಶಕ್ಕೆ ಬಿಗ್ ಶಾಕ್ ನೀಡಿದ್ದಾರೆ.

ಈ ಕುರಿತಂತೆ ಪುದುಚೇರಿ ಲೆಫ್ಟಿನೆಂಟ್ ಗವರ್ನರ್ ತಮಿಳಿಸಾಯಿ ಸೌಂಡ್ರಾ ರಾಜನ್ ಆದೇಶಿಸಿದ್ದು, ಕೇಂದ್ರಾಡಳಿತ ಪ್ರದೇಶ ದಲ್ಲಿರುವ ಕಾಂಗ್ರೆಸ್ ಸರ್ಕಾರಕ್ಕೆ ಬಹುಮತ ಇದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚನೆಗೆ ಆದೇಶ ಹೊರಡಿಸಿದ್ದಾರೆ.