ಬೆಂಗಳೂರು: ಒಂದೊಳ್ಳೆ ಉದ್ಯೋಗಕ್ಕಾಗಿ ಹುಡುಕಾಟ ನಡೆಸುತ್ತಿದ್ದೀರಾ? ಹಾಗಾದರೆ ಇಲ್ಲಿದೆ ಗುಡ್‌ನ್ಯೂಸ್. ದೇಶದ ಪ್ರಮುಖ ಬ್ಯಾಂಕ್‌ಗಳಲ್ಲಿ ಒಂದಾದ ಪಂಜಾಬ್ & ಸಿಂಧ್ ಬ್ಯಾಂಕ್ (Punjab and Sind Bank) ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ (Punjab and Sind Bank Recruitment 2024). 213 ಸ್ಪೆಷಲಿಸ್ಟ್ ಆಫೀಸರ್ ಹುದ್ದೆ ಇದಾಗಿದ್ದು, ಪದವಿ, ಸ್ನಾತಕೋತ್ತರ ಪದವಿ ಪಡೆದವರು ಅರ್ಜಿ ಸಲ್ಲಿಸಬಹುದು. ಆಸಕ್ತರು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಿದ್ದು, ಕೊನೆಯ ದಿನ ದಿನ ಸೆಪ್ಟೆಂಬರ್ 15. ಅರ್ಜಿ ಸಲ್ಲಿಸುವ ವಿಧಾನ, ಅರ್ಜಿ ಶುಲ್ಕ ಸೇರಿದಂತೆ ಸಂಪೂರ್ಣ ಮಾಹಿತಿ ಇಲ್ಲಿದೆ (Job Guide).
ಹುದ್ದೆಗಳ ವಿವರ ಮತ್ತು ವಿದ್ಯಾರ್ಹತೆ
ಆಫೀಸರ್- 56 ಹುದ್ದೆ, ವಿದ್ಯಾರ್ಹತೆ: ಬಿಇ ಅಥವಾ ಬಿ.ಟೆಕ್, ಪದವಿ, ಸ್ನಾತಕೋತ್ತರ ಪದವಿ, ಎಂಸಿಎ, ಸ್ನಾತಕೋತ್ತರ ಪದವಿ
ಮ್ಯಾನೇಜರ್ – 117 ಹುದ್ದೆ, ವಿದ್ಯಾರ್ಹತೆ: ಸಿಎ ಅಥವಾ ಐಸಿಡಬ್ಲ್ಯುಎ, ಸಿಎಫ್ಎ, ಎಫ್ಆರ್‌ಎಂ, ಸಿಎಐಐಬಿ, ಪದವಿ, ಬಿಇ ಅಥವಾ ಬಿ.ಟೆಕ್, ಪದವಿ, ಸ್ನಾತಕೋತ್ತರ ಪದವಿ, ಎಂಬಿಎ, ಪಿಜಿಡಿಬಿಎ, ಪಿಜಿಡಿಬಿಎಂ, ಪಿಜಿಡಿಎಂ, ಎಂಸಿಎ, ಎಂ.ಎಸ್‌ಸಿ, ಸ್ನಾತಕೋತ್ತರ ಪದವಿ, ಎಂ.ಟೆಕ್, ಎಂ.ಎಸ್.
ಸೀನಿಯರ್ ಮ್ಯಾನೇಜರ್ – 33 ಹುದ್ದೆ, ವಿದ್ಯಾರ್ಹತೆ: ಸಿಎ ಅಥವಾ ಐಸಿಡಬ್ಲ್ಯುಎ, ಸಿಎಫ್ಎ, ಎಫ್ಆರ್‌ಎಂ, ಸಿಎಐಐಬಿ, ಸಿಎಸ್, ಬಿ.ಎಸ್‌ಸಿ, ಎಲ್ಎಲ್‌ಬಿ, ಪದವಿ, ಬಿಇ ಅಥವಾ ಬಿ.ಟೆಕ್, ಪದವಿ, ಪಿಜಿಡಿಬಿಎ, ಪಿಜಿಡಿಎಂ, ಪಿಜಿಡಿಬಿಎಂ, ಎಂಬಿಎ, ಎಂಸಿಎ, ಎಂ.ಎಸ್‌ಸಿ, ಸ್ನಾತಕೋತ್ತರ ಪದವಿ, ಎಂ.ಟೆಕ್, ಎಂ.ಎಸ್.
ಚೀಫ್ ಮ್ಯಾನೇಜರ್ – 7 ಹುದ್ದೆ, ವಿದ್ಯಾರ್ಹತೆ: ಸಿಎ, ಬಿ.ಎಸ್‌ಸಿ, ಬಿಇ ಅಥವಾ ಬಿ.ಟೆಕ್, ಪದವಿ, ಸ್ನಾತಕೋತ್ತರ ಪದವಿ, ಎಂಬಿಎ, ಪಿಜಿಡಿಬಿಎಂ, ಎಂ.ಎಸ್‌ಸಿ, ಎಂಸಿಎ, ಸ್ನಾತಕೋತ್ತರ ಪದವಿ
ವಯೋಮಿತಿ
ಹುದ್ದೆ | ವಯೋಮಿತಿ |
ಆಫೀಸರ್ | 20-32 |
ಮ್ಯಾನೇಜರ್ | 25-35 |
ಸೀನಿಯರ್ ಮ್ಯಾನೇಜರ್ | 25-38 |
ಚೀಫ್ ಮ್ಯಾನೇಜರ್ | 28-40 |
ಸಡಿಲಿಕೆ
ಮೀಸಲಾತಿಗೆ ಅನುಗುನವಾಗಿ ವಯೋಮಿತಿಯಲ್ಲಿ ಸಡಿಲಿಕೆ ಲಭ್ಯ. ಒಬಿಸಿ (ಎನ್‌ಸಿಎಲ್) ಅಭ್ಯರ್ಥಿಗಳಿಗೆ 3 ವರ್ಷ, ಎಸ್‌ಸಿ / ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ ಮತ್ತು ಪಿಡಬ್ಲ್ಯುಬಿಡಿ ಅಭ್ಯರ್ಥಿಗಳಿಗೆ 10 ವರ್ಷಗಳ ರಿಯಾಯಿತಿ ಇದೆ.
ಅರ್ಜಿ ಶುಲ್ಕ ಮತ್ತು ಆಯ್ಕೆ ವಿಧಾನ
ಅರ್ಜಿ ಶುಲ್ಕವಾಗಿ ಸಾಮಾನ್ಯ / ಒಬಿಸಿ / ಇಡಬ್ಲ್ಯುಎಸ್ ಅಭ್ಯರ್ಥಿಗಳು 850 ರೂ., ಎಸ್‌ಸಿ / ಎಸ್‌ಟಿ / ಪಿಡಬ್ಲ್ಯುಡಿ ಅಭ್ಯರ್ಥಿಗಳು 100 ರೂ. ಆನ್‌ಲೈನ್ ಮೂಲಕ ಪಾವತಿಸಬೇಕು. ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ.
ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್ ಮಾಡಿ.
ಅರ್ಜಿ ಸಲ್ಲಿಸುವ ವಿಧಾನ
- ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ (https://ibpsonline.ibps.in/psbsoaug24/)
- ಹೆಸರು ನೋಂದಾಯಿಸಿ.
- ಲಾಗಿನ್ ಆಗಿ ಅರ್ಜಿಯನ್ನು ಭರ್ತಿ ಮಾಡಿ.
- ಅಗತ್ಯ ದಾಖಲೆ, ಫೋಟೊ ಸರಿಯಾದ ಅಳತೆಯಲ್ಲಿ ಅಪ್‌ಲೋಡ್ ಮಾಡಿ.
- ಆನ್‌ಲೈನ್ ಮೂಲಕ ಅರ್ಜಿ ಶುಲ್ಕ ಪಾವತಿಸಿ.
- ಭರ್ತಿ ಮಾಡಿದ ವಿವರಗಳನ್ನು ಮತ್ತೊಮ್ಮೆ ಪರಿಶೀಲಿಸಿ ಎಲ್ಲವೂ ಸರಿ ಇದ್ದರೆ Submit ಬಟನ್ ಕ್ಲಿಕ್ ಮಾಡಿ.
- ರಿಕ್ವೆಸ್ಟ್ ನಂಬರ್ ಅಥವಾ ಅಪ್ಲಿಕೇಷನ್ ನಂಬರ್ ನೋಟ್ ಮಾಡಿಟ್ಟುಕೊಳ್ಳಿ.
ಹೆಚ್ಚಿನ ವಿವರಗಳಿಗೆ ವೆಬ್‌ಸೈಟ್: punjabandsindbank.co.inಗೆ ಭೇಟಿ ನೀಡಿ.