Sunday, 3rd November 2024

ಪಂಜಾಬ್‌ನಲ್ಲಿ ಉಚಿತ ವಿದ್ಯುತ್ ಯೋಜನೆಗೆ ವರ್ಷ ಪೂರ್ಣ

ಚಂಡೀಗಢ: ಪಂಜಾಬ್​ ರಾಜ್ಯದಲ್ಲಿ ಆಮ್‌ ಆದ್ಮಿ ಪಕ್ಷದ​ ಸರ್ಕಾರ ಅಧಿಕಾರಕ್ಕೆ ಬಂದು ಜಾರಿಗೊಳಿಸಿದ 300 ಯೂನಿಟ್​ ಉಚಿತ ವಿದ್ಯುತ್​ ಒದಗಿಸುವ ಯೋಜನೆಗೆ ಇದೀಗ ಒಂದು ವರ್ಷವಾಗುತ್ತಿದೆ.

ವರ್ಷದಲ್ಲಿ ಶೇ 90ರಷ್ಟು ಕುಟುಂಬಗಳು ರಾಜ್ಯದಲ್ಲಿ ಶೂನ್ಯ ಬಿಲ್​ ಪ್ರಯೋಜನ ಪಡೆ ದಿವೆ. ರೈತರಿಗೆ 8 ಗಂಟೆಗೂ ಹೆಚ್ಚು ಕಾಲ ಯಾವುದೇ ಕಡಿತವಿಲ್ಲದೆ ನಿರಂತರವಾಗಿ ವಿದ್ಯುತ್​ ಪೂರೈಕೆ ಮಾಡಲಾಗುತ್ತಿದೆ ಎಂದು ಸರ್ಕಾರ ಹೇಳಿದೆ.

ಮುಖ್ಯಮಂತ್ರಿ ಭಗವಂತ್​ ಮಾನ್​ ಅವರು ಉಚಿತ ವಿದ್ಯುತ್​ ಖಾತರಿ ಯೋಜನೆ ಯಶಸ್ವಿ ಯಾಗಿ ಒಂದು ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ರಾಜ್ಯದ ಜನರಿಗೆ ಅಭಿನಂದನೆ ತಿಳಿಸಿದ್ದಾರೆ.

ಯೋಜನೆಯಿಂದ ಸಮಾಜದ ಪ್ರತಿಯೊಂದು ವರ್ಗಕ್ಕೂ ದೊಡ್ಡ ಲಾಭವಾಗಿದೆ. ಸರ್ಕಾರವು ಕಳೆದ ವರ್ಷ ಜುಲೈ 1ರಂದು ಜನರಿಗೆ ಉಚಿತ ವಿದ್ಯುತ್ ನೀಡುವ ಭರವಸೆ ಯನ್ನು ಜಾರಿಗೆ ತಂದಿದೆ. ಅಂದಿನಿಂದ ಇಂದಿನವರೆಗೆ ರಾಜ್ಯದಲ್ಲಿ ಶೇ.90ರಷ್ಟು ಮನೆ ಗಳಿಗೆ ಉಚಿತ ವಿದ್ಯುತ್ ಸಿಗುತ್ತಿದೆ. ಕಳೆದ ಜುಲೈನಿಂದ ವಿದ್ಯುತ್ ಬಿಲ್ ಶೂನ್ಯವಾಗಿದೆ” ಎಂದರು.

ರೈತರಿಗೆ 8 ಗಂಟೆಗೂ ಹೆಚ್ಚು ಕಾಲ ಯಾವುದೇ ಕಡಿತವಿಲ್ಲದೆ ನಿರಂತರ ವಿದ್ಯುತ್ ಪೂರೈಕೆಯಾಗುತ್ತಿದೆ. ಸರ್ಕಾರವು ಪಂಜಾಬ್ ರಾಜ್ಯ ವಿದ್ಯುತ್ ನಿಗಮಕ್ಕೆ 20,200 ಕೋಟಿ ರೂ. ಗಳ ಸಬ್ಸಿಡಿ ಸಹ ಪಾವತಿಸಿದೆ.