Saturday, 14th December 2024

ಪ್ರಧಾನಿ ಪಂಜಾಬ್ ಭೇಟಿ ವೇಳೆ ಭದ್ರತಾ ಲೋಪ: ಪೊಲೀಸ್ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ

ಚಂಡೀಗಢ: ಪ್ರಧಾನಿ ನರೇಂದ್ರ ಮೋದಿ ಅವರ ಪಂಜಾಬ್ ಭೇಟಿಯ ವೇಳೆ ಭದ್ರತಾ ಲೋಪ ಎಸಗಿರುವ ಬಗ್ಗೆ ರಾಜಕೀಯ ವಿವಾದ ಉಂಟಾದ ಒಂದು ವರ್ಷದ ನಂತರ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ಮಾಜಿ ಡಿಜಿಪಿ ಸಿದ್ದಾರ್ಥ್ ಚಟ್ಟೋಪಾಧ್ಯಾಯ ಹಾಗೂ ಇತರ ಇಬ್ಬರು ಪೊಲೀಸ್ ಅಧಿಕಾರಿಗಳ ವಿರುದ್ಧ ” ಶಿಸ್ತು ಕ್ರಮ” ವನ್ನು ಆರಂಭಿಸಲು ಆದೇಶಿಸಿದರು.

ಜನವರಿ 5, 2022 ರಂದು, ಪಿಎಂ ಮೋದಿ ಅವರು ಪಂಜಾಬ್‌ನ ಹುಸೇನಿವಾಲಾಗೆ ಪ್ರಯಾಣಿಸು ತ್ತಿದ್ದಾಗ ಫಿರೋಝ್ ಪುರದಲ್ಲಿ ಪ್ರತಿಭಟನಾಕಾರರ ದಿಗ್ಬಂಧನದಿಂದಾಗಿ ಸುಮಾರು 15-20 ನಿಮಿಷಗಳ ಕಾಲ ಫ್ಲೈಓವರ್‌ನಲ್ಲಿ ಸಿಲುಕಿಕೊಂಡಿದ್ದರು. ಇದರಿಂದ ಪ್ರಧಾನಿ ಮೋದಿ ಅವರ ಭದ್ರತೆ ಉಲ್ಲಂಘಿಸಲಾಗಿತ್ತು.

ಪಂಜಾಬ್‌ನಲ್ಲಿ ಪ್ರಧಾನಿಯವರ ಪ್ರಯಾಣದಲ್ಲಿ “ಪ್ರಮುಖ ಭದ್ರತಾ ಲೋಪ” ದ ನಂತರ, ಅವರ ಬೆಂಗಾವಲು ಪಡೆ ಹಿಂತಿರುಗಲು ನಿರ್ಧರಿಸಿತು ಎಂದು ಕೇಂದ್ರ ಗೃಹ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.

ಪಂಜಾಬ್ ಅಸೆಂಬ್ಲಿ ಚುನಾವಣೆಗೆ ಮುನ್ನ ಭದ್ರತಾ ಉಲ್ಲಂಘನೆಯು ಎಎಪಿ ನೇತೃತ್ವದ ಪಂಜಾಬ್ ಸರಕಾರ ಹಾಗೂ ಬಿಜೆಪಿ ನೇತೃತ್ವದ ಕೇಂದ್ರದ ನಡುವೆ ತೀವ್ರ ಮಾತಿನ ಚಕಮಕಿಗೆ ಕಾರಣವಾಯಿತು.