Friday, 13th December 2024

ಮುಂದಿನ ನೌಕಾಪಡೆ ಮುಖ್ಯಸ್ಥರಾಗಿ ಆರ್.ಹರಿ ಕುಮಾರ್ ನೇಮಕ

Hari Kumar -Vishwavani

ನವದೆಹಲಿ: ಮುಂದಿನ ನೌಕಾಪಡೆ ಮುಖ್ಯಸ್ಥರಾಗಿ ಪಶ್ಚಿಮ ನೌಕಾ ಕಮಾಂಡ್‌ನ ಫ್ಲಾಗ್ ಆಫೀಸರ್ ಕಮಾಂಡಿಂಗ್-ಇನ್-ಚೀಫ್ ವೈಸ್ ಅಡ್ಮಿರಲ್ ಆರ್ ಹರಿ ಕುಮಾರ್ ನೇಮಕ ವಾಗಲಿದ್ದಾರೆ.

ನ.30 ರಂದು ಅಡ್ಮಿರಲ್ ಕರಂಬಿರ್ ಸಿಂಗ್ ನಿವೃತ್ತರಾದ ನಂತರ ವೈಸ್ ಅಡ್ಮಿರಲ್ ಹರಿ ಕುಮಾರ್ ಅವರು ಅಧಿಕಾರ ವಹಿಸಿಕೊಳ್ಳ ಲಿದ್ದಾರೆ .

ಐಎನ್‌ಎಸ್ ನಿಶಾಂಕ್, ಮಿಸೈಲ್ ಕಾರ್ವೆಟ್, ಐಎನ್‌ಎಸ್ ಕೋರಾ ಮತ್ತು ಗೈಡೆಡ್ ಮಿಸೈಲ್ ಡೆಸ್ಟ್ರಾಯರ್ ಐಎನ್‌ಎಸ್ ರಣವೀರ್ ಸೇರಿದಂತೆ ವಿವಿಧ ಕಮಾಂಡ್, ಸಿಬ್ಬಂದಿ ಮತ್ತು ಸೂಚನಾ ನೇಮಕಾತಿಗಳಲ್ಲಿ ಸೇವೆ ಸಲ್ಲಿಸಿದ್ದಾರೆ ಎಂದು ಸಚಿವಾ ಲಯ ತಿಳಿಸಿದೆ. ಅವರು ಭಾರತೀಯ ನೌಕಾಪಡೆಯ ವಿಮಾನವಾಹಕ ನೌಕೆ ಐಎನ್‌ಎಸ್‌ ವಿರಾಟ್‌ಗೆ ಕಮಾಂಡರ್ ಆಗಿದ್ದರು.

ಪಶ್ಚಿಮ ನೌಕಾ ಕಮಾಂಡ್ ಅನ್ನು ವಹಿಸಿಕೊಳ್ಳುವ ಮೊದಲು, ಹರಿ ಕುಮಾರ್ ಅವರು ಹೆಡ್ಕ್ವಾರ್ಟರ್ಸ್ ಇಂಟಿಗ್ರೇಟೆಡ್ ಡಿಫೆನ್ಸ್ ಸ್ಟಾಫ್ ನ ಇಂಟಿಗ್ರೇಟೆಡ್ ಸ್ಟಾಫ್ ಕಮಿಟಿಯ ಮುಖ್ಯಸ್ಥರಾಗಿದ್ದರು.