Wednesday, 11th December 2024

ಉಪರಾಷ್ಟ್ರಪತಿ ಜತೆಗೆ ಫೋಟೋಗೆ ಪೋಸ್: ರಾಹುಲ್ ಭಂಗಿಗೆ ಟೀಕೆ

ನವದೆಹಲಿ: ಸಂಸತ್ ಭವನದಲ್ಲಿ ಭಾರತದ ಉಪರಾಷ್ಟ್ರ ಪತಿಯೊಂದಿಗೆ ತೆಗೆದ ಛಾಯಾಚಿತ್ರದಲ್ಲಿ ಕಾಂಗ್ರೆಸ್ ನಾಯಕ ಮತ್ತು ವಯನಾಡ್ ಸಂಸದ ರಾಹುಲ್ ಗಾಂಧಿ ಅವರು ನೀಡಿರುವ ಪೋಸ್ ಸಾಮಾಜಿಕ ಜಾಲತಾಣದಲ್ಲಿ ಟೀಕೆಗೆ ಗುರಿಯಾಗಿದೆ.

ಸಂಸತ್ ಭವನದಲ್ಲಿ ನಡೆದ ಔಪಚಾರಿಕ ಕಾರ್ಯಕ್ರಮದ ವೇಳೆಗೆ ಉಪರಾಷ್ಟ್ರಪತಿ ಜಗದೀಪ್ ಧಂಖರ್, ರಾಜ್ಯಸಭೆಯ ಉಪ ಸಭಾಪತಿ ಹರಿವಂಶ್ ನಾರಾಯಣ್ ಸಿಂಗ್, ರಾಜ್ಯಸಭೆಯ ಸಭಾ ನಾಯಕ ಪಿಯೂಷ್ ಗೋಯಲ್, ಹೊಸದಾಗಿ ಆಯ್ಕೆಯಾದ ರಾಜ್ಯಸಭಾ ಸಂಸದೆ ಸೋನಿಯಾ ಗಾಂಧಿ ಅವರೊಂದಿಗೆ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಮತ್ತು ಪತಿ ರಾಬರ್ಟ್ ವಾದ್ರಾ  ಅವರು ತೆಗೆದುಕೊಂಡಿರುವ ಛಾಯಾ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಈ ಚಿತ್ರದಲ್ಲಿ ರಾಹುಲ್ ಗಾಂಧಿ ನಿಂತಿರುವ ಭಂಗಿ ಟೀಕೆಗೆ ಗುರಿಯಾಗಿದೆ. ರಾಹುಲ್ ಗಾಂಧಿಯವರ ಉಡುಗೆ ಮತ್ತು ಕೆಮರಾ ಗೆ ನೀಡಿರುವ ಭಂಗಿಯ ಬಗ್ಗೆ ಪ್ರಶ್ನಿಸಿ ಹಲವಾರು ಮಂದಿ ಅವರನ್ನು ಟೀಕಿಸಿದ್ದಾರೆ.