ಅಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಲಿದ್ದು, ಗುಜರಾತ್‌ನಲ್ಲಿ ಇತ್ತೀಚಿನ ದುರಂತಗಳಿಂದ ಸಂತ್ರಸ್ತರ ಕುಟುಂಬಗಳನ್ನು ಭೇಟಿ ಮಾಡಲಿದ್ದಾರೆ.
ಗುಜರಾತ್ ಪ್ರವಾಸದ ಸಮಯದಲ್ಲಿ ರಾಹುಲ್ ಗಾಂಧಿ ರಾಜ್‌ಕೋಟ್ ಗೇಮ್ ಝೋನ್ ಬೆಂಕಿ ದುರಂತ, ವಡೋದರಾದ ದೋಣಿ ಮುಳುಗುವಿಕೆ ಮತ್ತು ಮೋರ್ಬಿ ಸೇತುವೆ ಕುಸಿತ ಸೇರಿದಂತೆ ವಿವಿಧ ಘಟನೆಗಳಲ್ಲಿ ಪ್ರಾಣ ಕಳೆದುಕೊಂಡವರ ಕುಟುಂಬಗಳಿಗೆ ಸಂತಾಪ ಸೂಚಿಸಲಿದ್ದಾರೆ.
ಗುಜರಾತ್ ಕಾಂಗ್ರೆಸ್ ಅಧ್ಯಕ್ಷ ಶಕ್ತಿಸಿನ್ಹ್ ಗೋಹಿಲ್ ಅವರು ರಾಹುಲ್ ಗಾಂಧಿಯ ಪ್ರವಾಸವನ್ನು ದೃಢಪಡಿಸಿದ್ದಾರೆ. “ರಾಹುಲ್ ಗಾಂಧಿಯವರು ಶನಿವಾರ ಮಧ್ಯಾಹ್ನ 12.30ರ ಸುಮಾರಿಗೆ ಜಿಪಿಸಿಸಿ ಕಚೇರಿಗೆ ಆಗಮಿಸುತ್ತಾರೆ. ಅವರು ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮತ್ತು ರಾಜ್‌ಕೋಟ್ ಗೇಮ್ ಝೋನ್ ಬೆಂಕಿ ಮತ್ತು ಇತರ ದುರಂತಗಳಲ್ಲಿ ಸಾವನ್ನಪ್ಪಿದ ಸಂತ್ರಸ್ತರ ಸಂಬಂಧಿಕರನ್ನು ಭೇಟಿ ಮಾಡುತ್ತಾರೆ” ಎಂದಿದ್ದಾರೆ.
ರಾಹುಲ್ ಗಾಂಧಿಯವರು ತಮ್ಮ ಗುಜರಾತ್ ಭೇಟಿಯ ಸಂದರ್ಭದಲ್ಲಿ ಗುಜರಾತ್ ಪ್ರದೇಶ ಕಾಂಗ್ರೆಸ್ ಸಮಿತಿ (ಜಿಪಿಸಿಸಿ) ಕಚೇರಿಯ ಹೊರಗೆ ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವೆ ಘರ್ಷಣೆ ಸಂಭವಿಸಿದ ನಂತರ ಬಂಧಿತರಾಗಿರುವ ಐವರು ಕಾಂಗ್ರೆಸ್ ಕಾರ್ಯಕರ್ತರ ಕುಟುಂಬಗಳನ್ನು ಭೇಟಿಯಾಗಲಿರುವುದು ವಿಶೇಷ. ಲೋಕಸಭೆಯಲ್ಲಿ ರಾಹುಲ್ ಗಾಂಧಿಯವರು ಮಾಡಿದ್ದ ಹಿಂದೂ ವಿರೋಧಿ ಹೇಳಿಕೆಗಳಿಂದ ಉಂಟಾದ ಘರ್ಷಣೆಯು ಲ್ಲು ತೂರಾಟಕ್ಕೆ ಕಾರಣವಾಗಿತ್ತು. ಈ ಘಟನೆಯಲ್ಲಿ ಸಹಾಯಕ ಪೊಲೀಸ್ ಕಮಿಷನರ್ ಸೇರಿದಂತೆ ಐವರು ಪೊಲೀಸರಿಗೆ ಗಾಯವಾಗಿತ್ತು.