Friday, 13th December 2024

ರಾಹುಲ್ ಗಾಂಧಿ ಲೋಕಸಭೆ ಸದಸ್ಯತ್ವ ರದ್ದು ಮಾಡಲು ಆಗ್ರಹ

ವದೆಹಲಿ: ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಲಂಡನ್‌ನಲ್ಲಿ ಆಡಿರುವ ಮಾತುಗಳು ಭಾರತದ ‍‍ಪ್ರಜಾ‍ಪ್ರಭುತ್ವವನ್ನು ಅವಮಾನಿಸು ವಂತಿದೆಯೇ ಇಲ್ಲವೇ ಎಂದು ಪರಿಶೀಲನೆ ಮಾಡಲು ಸಂಸದೀಯ ಸಮಿತಿ ರಚನೆ ಮಾಡಬೇಕು ಎಂದು ಬಿಜೆಪಿ ಲೋಕಸಭೆ ಸ್ಪೀಕರ್‌ ಅವರಿಗೆ ಮನವಿ ಸಲ್ಲಿಸಿದೆ.

ಒಂದು ವೇಳೆ ರಾಹುಲ್ ಗಾಂಧಿ ಸಂಸತ್‌ನಲ್ಲಿ ಕ್ಷಮೆ ಕೇಳದೇ ಇದ್ದರೆ, ಅವರ ಲೋಕಸಭೆ ಸದಸ್ಯ ತ್ವವನ್ನು ರದ್ದು ಮಾಡಬೇಕು ಎಂದು ಬಿಜೆಪಿ ಆಗ್ರಹಿಸಿದೆ.

ರಾಹುಲ್‌ ಗಾಂಧಿ ಅವರ ಹೇಳಿಕೆಯು ನಿಂದನಾತ್ಮಕವಾಗಿದ್ದು, ಹೀಗಾಗಿ ಲೋಕಸಭೆಯ ಕಾರ್ಯಕಲಾಪ ನಿಯಮ 223ರ ಅಡಿಯಲ್ಲಿ ಸಂಸದೀಯ ಸಮಿತಿ ರಚನೆ ಮಾಡಬೇಕು ಎಂದು ಬಿಜೆಪಿಯ ಸಂಸದ ನಿಶಿಕಾಂತ್‌ ದುಬೆ ಸ್ಪೀಕರ್‌ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ. ಅಲ್ಲದೇ ರಾಹುಲ್‌ ಗಾಂಧಿಯವರ ಸದಸ್ಯತ್ವ ರದ್ದು ಮಾಡುವ ಬಗ್ಗೆ ಸಮಿತಿ ಪರಿಶೀಲನೆ ಮಾಡಬೇಕು ಎಂದು ಕೋರಿದ್ದಾರೆ.

ರಾಹುಲ್‌ ಗಾಂಧಿ ಅವರ ಮಾತುಗಳು ವಿಷಪೂರಿತವಾಗಿದ್ದು, ಇದು ವ್ಯವಸ್ಥಿತವಾದ ಭಾರತ ವಿರೋಧಿ ಅಭಿಯಾನವಾಗಿದೆ. ಸಂಸತ್ತನ್ನು ಅವಮಾನಿಸುವ ಹಾಗೂ ನಿಂದಿಸುವ ಕ್ರಿಯೆಯಾಗಿದೆ ಎಂದು ಎಂದು ಅವರು ಹೇಳಿದ್ದಾರೆ.