ನವದೆಹಲಿ: ಯಾವ ಕ್ಷೇತ್ರವನ್ನು ಉಳಿಸಿಕೊಳ್ಳಬೇಕು ಎಂಬ ಸಂದಿಗ್ದತೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ರಾಹುಲ್ ಸಿಲುಕಿದ್ದಾರೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಕೇರಳದ ವಯನಾಡು ಹಾಗೂ ಉತ್ತರ ಪ್ರದೇಶದ ರಾಯ್ ಬರೇಲಿ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದಾರೆ.
ವಯನಾಡು ಮತ್ತು ರಾಯ್ ಬರೇಲಿ ಜನತೆಯ ಅಪಾರ ಪ್ರೀತಿಗೆ ಕೃತಜ್ಷತೆ ಸಲ್ಲಿಸುತ್ತೇನೆ. ನೀವು ವಯನಾಡು ಮತ್ತು ರಾಯ್ ಬರೇಲಿ ಎರಡಲ್ಲಿ ಯವುದಕ್ಕೆ ಸಂಸದರಾಗಿರುತ್ತೀರಿ ಎಂದು ಕೇಳುತ್ತಿದ್ದೀರಿ. ನನ್ನ ಕೈಯಲ್ಲಿ ಅಧಿಕಾರ ಇದ್ದಿದ್ದರೆ ನಾನು ಎರಡೂ ಸ್ಥಳಗಳ ಸಂಸದನಾಗಿ ಉಳಿಯಲು ಬಯಸುತ್ತೇನೆ ಎಂದು ಹೇಳಿದ್ದಾರೆ. ಆದರೆ, ಯಾವ ಕ್ಷೇತ್ರವನ್ನು ಉಳಿಸಿಕೊಳ್ಳುತ್ತೇನೆ ಎಂಬುದರ ಕುರಿತು ರಾಹುಲ್ ಸ್ಪಷ್ಟನೆ ನೀಡಿಲ್ಲ.
ಪತ್ರಿಕಾಗೋಷ್ಠಿ ನಡೆಸಿದ್ದ ರಾಹುಲ್ ಗಾಂಧಿ, ಪತ್ರಕರ್ತರ ಈ ಪ್ರಶ್ನೆಗೆ ಯಾವುದೇ ಉತ್ತರ ನೀಡಿಲ್ಲ. ಈಗ ಫಲಿತಾಂಶ ಬಂದಿದೆ. ಮುಂದೆ ನಿರ್ಧಾರ ಮಾಡುತ್ತೇನೆ ಎಂದು ಹೇಳಿದ್ದರು.