Wednesday, 11th December 2024

ಟಾಟಾನಗರದಲ್ಲಿ ಹಳಿ ತಪ್ಪಿದ ರೈಲಿನ ಬೋಗಿ

ಜೆಮ್ಶೆಡ್‌ಪುರ: ಜಾರ್ಖಂಡ್‌ನ ಜೆಮ್ಶೆಡ್‌ಪುರದ ಟಾಟಾನಗರದಲ್ಲಿ ಪ್ರಯಾಣಿಕ ರೈಲಿನ ಬೋಗಿಯೊಂದು ಹಳಿತಪ್ಪಿದೆ.

ವಾರಕ್ಕೊಮ್ಮೆ ಸಂಚರಿಸುವ ಮುಂಬೈ ಸಿಎಸ್‌ಎಟಿ-ಹೌರಾ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್‌ನ 90 ಪ್ರಯಾಣಿಕರಿದ್ದ ಬೋಗಿ ಹಳಿ ತಪ್ಪಿದ್ದು, ಯಾರಿಗೂ ಗಾಯ ಗಳಾಗಿಲ್ಲ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. ಪ್ಲಾಟ್‌ಫಾರ್ಮ್‌ 4ಕ್ಕೆ ಪ್ರವೇಶಿಸುತ್ತಿದ್ದಾಗ ಘಟನೆ ನಡೆದಿದೆ.

ಬಳಿಕ ಪರ್ಯಾಯ ಬೋಗಿಯ ವ್ಯವಸ್ಥೆ ಮಾಡಲಾಯಿತು.