ನವದೆಹಲಿ : ವರ್ಷದ ಪ್ರಾರಂಭದಿಂದ ಇಲ್ಲಿಯವರೆಗೆ 3,800 ಕ್ಕೂ ಹೆಚ್ಚು ಮಹಿಳೆಯರು ಮತ್ತು ಹುಡುಗಿಯರಿಗೆ ತುರ್ತು ಸಂದರ್ಭಗಳಲ್ಲಿ ರೈಲ್ವೆ ರಕ್ಷಣಾ ಪಡೆ ಸಹಾಯ ಮಾಡುವ ಮೂಲಕ ಅವರನ್ನು ರಕ್ಷಿಸಿದೆ.
ಮಾನವ ಕಳ್ಳಸಾಗಣೆದಾರರಿಂದ ರಕ್ಷಣೆ ಸೇರಿದಂತೆ ರೈಲುಗಳು ಮತ್ತು ನಿಲ್ದಾಣದ ಆವರಣದಲ್ಲಿ ಅಸುರಕ್ಷಿತ ಸಂದರ್ಭಗಳಲ್ಲಿ ಸಹಾಯ ಮಾಡಲಾಗಿದೆ ಎಂದು ಆರ್‌ಪಿಎಫ್ ಹೇಳಿಕೆಯಲ್ಲಿ ತಿಳಿಸಿದೆ.
ರೈಲ್ವೆ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ರೈಲ್ವೆ ರಕ್ಷಣಾ ಪಡೆಯ ಒಂದು ತುಕಡಿಯು ದೆಹಲಿಯಲ್ಲಿ ನಡೆದ ಹಾಫ್ ಮ್ಯಾರ ಥಾನ್‌ನಲ್ಲಿ ಭಾಗಿಯಾಗಿ ಮಹಿಳೆಯರ ಸುರಕ್ಷತೆ ಮತ್ತು ಸಮಸ್ಯೆಗಳ ಕುರಿತು ಬೆಳಕು ಚೆಲ್ಲಿತು.
“ಮಹಿಳೆಯರಿಗೆ ರೈಲುಗಳಲ್ಲಿ ಸುರಕ್ಷಿತ ಪ್ರಯಾಣವನ್ನು ಉತ್ತೇಜಿಸಲು ಆರ್‌ಪಿಎಫ್‌ನ 25 ಸದಸ್ಯರ ತಂಡವು ದೆಹಲಿ ಹಾಫ್ ಮ್ಯಾರಥಾನ್ 2023 ರಲ್ಲಿ ಭಾಗವಹಿಸಿದೆ” ಎಂದು ಸಚಿವಾಲಯ ತಿಳಿಸಿದೆ.
“ಭಾರತೀಯ ರೈಲ್ವೆ ಜಾಲದಲ್ಲಿ ಮಹಿಳೆಯರ ಸುರಕ್ಷತೆ ಮತ್ತು ಭದ್ರತೆಯನ್ನು ಉತ್ತೇಜಿಸುವ ಗುರಿ ಹೊಂದಿರುವ ಆರ್‌ಪಿಎಫ್‌ನ ವಿವಿಧ ಉಪಕ್ರಮಗಳ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ನಮ್ಮ ಉದ್ದೇಶ ವಾಗಿದೆ. ಅದರಲ್ಲೂ ‘ಮೇರಿ ಸಹೇಲಿ’ ಅಂತಹ ಅಭಿಯಾನದ ಬಗ್ಗೆ ಗಮನ ಕೇಂದ್ರೀ ಕರಿಸಲಾಗಿದೆ. 2023 ರಲ್ಲಿ ಆರ್‌ಪಿಎಫ್ ಸಿಬ್ಬಂದಿ ಗಮನಾರ್ಹ ಸಾಧನೆ ಪ್ರದರ್ಶಿಸಿದ್ದಾರೆ. ಸಂಚರಿಸುವ ರೈಲುಗಳ ಬಳಿ ಅಪಾಯಕ್ಕೆ ಸಿಲುಕಿದ್ದ 862 ಮಹಿಳೆಯರನ್ನು ರಕ್ಷಿಸಿದ್ದಾರೆ” ಎಂದು ಹೇಳಿದೆ.
“ಆಪರೇಷನ್ ನನ್ಹೆ ಫರಿಷ್ಟೆ” ಅಡಿಯಲ್ಲಿ ನಿಲ್ದಾಣಗಳು ಮತ್ತು ರೈಲುಗಳಲ್ಲಿ ಅಪಾಯಕ್ಕೆ ಸಿಲುಕಿದ್ದ 2,898 ಯುವತಿ ಯರನ್ನು ರಕ್ಷಿಸಿದ್ದಾರೆ. ಇದಲ್ಲದೇ, ಆರ್‌ಪಿಎಫ್ ಸಿಬ್ಬಂದಿ 51 ಅಪ್ರಾಪ್ತ ಬಾಲಕಿಯರು ಮತ್ತು ಆರು ಮಹಿಳೆಯರನ್ನು ಮಾನವ ಕಳ್ಳಸಾಗಣೆದಾರರ ಕಪಿಮುಷ್ಠಿಯಿಂದ ರಕ್ಷಿಸಿದ್ದಾರೆ.