Friday, 13th December 2024

ಕೋಳಿಗಳ ಕಳ್ಳತನ: ಪೊಲೀಸ್ ರಕ್ಷಣೆ ಕೋರಿದ ಮಹಿಳೆ

ರಾಯಪುರ: ಛತ್ತೀಸ್ಗಢದ ರತನ್ಪುರದ ಜಾಂಕಿ ಬಾಯಿ ಬಿಜ್ವಾರ್ ಅವರು ತನ್ನ ನೆರೆಹೊರೆಯವರು ಕೋಳಿಗಳನ್ನು ಕಳ್ಳತನ ಮಾಡುವುದರಿಂದಾಗಿ ತಾನು ಸಾಕಿರುವ ಹುಂಜಗಳಿಗೆ ಪೊಲೀಸ್ ರಕ್ಷಣೆ ಕೋರಿದ್ದಾರೆ.
ಬಿಲಾಸ್ಪುರದ ರತನ್ಪುರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಜಾಂಕಿ ಲಿಖಿತ ದೂರು ದಾಖಲಿಸಿದ್ದು, ತನ್ನ ಕುಟುಂಬವು ಕೋಳಿಗಳನ್ನು ಪ್ರೀತಿಯಿಂದ ಸಾಕುತ್ತಿದೆ ಎಂದು ವಿವರಿಸಿದ್ದಾರೆ. ನೆರೆಹೊರೆಯವ ರಾದ ಬುಗಲ್ ಮತ್ತು ದುರ್ಗಾ ಎಂಬುವವರು ತಾನು ಸಾಕಿದ್ದ ಹುಂಜವನ್ನು ತೆಗೆದುಕೊಂಡು ಹೋಗಲು ಯತ್ನಿಸುತ್ತಿದ್ದಾರೆ. ‘ಒಮ್ಮೆ, ಎರಡು ಕೆಜಿ ತೂಕದ ನನ್ನ ಕಂದು ಬಣ್ಣದ ಹುಂಜವನ್ನು ತಿನ್ನಲು ತೆಗೆದುಕೊಂಡು ಹೋಗುವುದನ್ನು ನೋಡಿದೆ’ ಎಂದು ದೂರಿದ್ದಾರೆ.
ನನಗೆ ತುಂಬಾ ನೋವಾಗಿದೆ ಮತ್ತು ತಕ್ಷಣ ಪೊಲೀಸರಿಗೆ ದೂರು ನೀಡಲು ನಿರ್ಧರಿಸಿದೆ’ ಎಂದು ಹೇಳಿದರು.