Wednesday, 11th December 2024

Raj Kapoor Birthday: ಕಪೂರ್ ಫ್ಯಾಮಿಲಿ ಮಿಟ್ಸ್ ಪಿಎಂ ಮೋದಿ; ಅದರ ಹಿಂದಿದೆ ಒಂದು ಬಲವಾದ ಕಾರಣ

ನವದೆಹಲಿ: ರಾಜ್ ಕಪೂರ್(Raj Kapoor) ಅವರನ್ನು ಭಾರತೀಯ ಸಿನಿಮಾದ ‘ಚಾರ್ಲಿ ಚಾಪ್ಲಿನ್’ ಎಂದು ಕರೆಯಲಾಗುತ್ತದೆ. ತಮ್ಮ ವೃತ್ತಿಜೀವನದಲ್ಲಿ ಮೂರು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ, ಹನ್ನೊಂದು ಫಿಲ್ಮ್‌ಫೇರ್ ಪ್ರಶಸ್ತಿಗಳು ಮತ್ತು 1987 ರಲ್ಲಿ ಭಾರತ ಸರ್ಕಾರವು ಅವರಿಗೆ ನೀಡಿದ ಪ್ರಸಿದ್ಧ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಸೇರಿದಂತೆ ವಿವಿಧ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಇದೀಗ ಭಾರತೀಯ ಸಿನೆಮಾ(Inidan Cinema) ಐಕಾನ್ ಆಗಿದ್ದ ರಾಜ್ ಕಪೂರ್ (Raj Kapoor Birthday)ಅವರ ನೂರನೇ ಜನ್ಮ ದಿನೋತ್ಸವದ ಖುಷಿಯಲ್ಲಿ ಕಪೂರ್‌ ಕುಟುಂಬವಿದ್ದು, ಇದೇ ಡಿ.14ರಂದು ನಟ, ನಿರ್ಮಾಪಕ ರಾಜ್ ಕಪೂರ್ ಅವರ ಹುಟ್ಟಿದ ದಿನವಾಗಿದೆ.

ವಿಶೇಷ ಎಂದರೆ ರಾಜ್ ಕಪೂರ್ 100ನೇ ವರ್ಷದ ಬರ್ತ್ಡೇ ಇದಾಗಿದ್ದು, ಕಪೂರ್ ಪ್ಯಾಮಿಲಿಯಲ್ಲಿ ಸಂಭ್ರಮ ಮನೆ ಮಾಡಿದೆ. ಈ ಹಿನ್ನಲೆಯಲ್ಲಿ ಕಪೂರ್ ಮನೆತನದ ಕುಡಿಗಳು ರಾಜ್ ಕಪೂರ್ 100ನೇ ವರ್ಷದ ಜನ್ಮ ದಿನದ ಸ್ಮರಣಾರ್ಥವಾಗಿ ಅವರ 10 ಸಿನಿಮಾಗಳ ಪ್ರದರ್ಶನ ಮತ್ತು ವಿಶೇಷ ಕಾರ್ಯಕ್ರಮವನ್ನು ಆಯೋಜಿಸಿದ್ದು, ಈ ಕಾರ್ಯಕ್ರಮಕ್ಕೆ ಪ್ರಧಾನಿ ಮೋದಿ(PM Modi) ಯನ್ನು ಕಪೂರ್ ಕುಟುಂಬ ಆಹ್ವಾನಿಸಿದೆ.

ಈ ಕುರಿತು ಬಿಟೌನ್ ಬ್ಯೂಟಿ ಕರೀನಾ ಕಪೂರ್ ಖಾನ್ ಇನ್ ಸ್ಟಾಗ್ರಾಂ ಪೋಸ್ಟ್ ಹಂಚಿಕೊಂಡಿದ್ದು, ಸಿನಿಮಾ ಐಕಾನ್ ರಾಜ್ ಕಪೂರ್ ಅವರ ಜನ್ಮ ಶತಮಾನೋತ್ಸವದ ಮೊದಲು ಅಜ್ಜನ “ ವಿಶಿಷ್ಟವಾದ ಜೀವನ ಮತ್ತು ಪರಂಪರೆಯನ್ನು ಸ್ಮರಿಸಲು” ನಮ್ಮೆಲ್ಲರನ್ನೂ ಆಹ್ವಾನಿಸಿದ್ದಕ್ಕಾಗಿ ಪ್ರಧಾನಿ ಮೋದಿ ಅವರಿಗೆ ಧನ್ಯವಾದ” ಎಂದು ಹೇಳಿದ್ದಾರೆ.

ಅಲ್ಲದೇ ರಾಜ್ ಕಪೂರ್ ಅವರ ಜನ್ಮದಿನೋತ್ಸವಕ್ಕೆ ಮುಂಗಡವಾಗಿಯೇ ಪ್ರಧಾನಿ ಮೋದಿ ಅವರು ಕಪೂರ್ ಮನೆತನದ ಸದಸ್ಯರನ್ನು ಆಹ್ವಾನಿಸಿರುವುದು ನಮಗೆ ಖುಷಿ ತಂದಿದೆ. ನಮ್ಮ ಅಜ್ಜ, ದಂತಕಥೆ ರಾಜ್ ಕಪೂರ್ ಅವರ ಸಾಧನೀಯ ಜೀವನ ಮತ್ತು ವರ್ಚಸ್ಸನ್ನು ಸ್ಮರಿಸಲು ಗೌರವಾನ್ವಿತ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಆಹ್ವಾನಿಸಲು ಅವಕಾಶ ಸಿಕ್ಕಿರುವ ನಮ್ಮೆಲ್ಲರು ಪುಣ್ಯ. ಹಾಗೇ ನಮ್ಮನ್ನು ಕರೆಸಿ ಸತ್ಕರಿಸಿದ ಮೋದಿಯವರಿಗೆ ಅಪಾರವಾಗಿ ಗೌರವಿಸುತ್ತಾ, ನಿಮ್ಮ ಅತ್ಯಮೂಲ್ಯ ಸಮಯ ನೀಡಿದ್ದಕ್ಕೆ ಮೋದಿಜೀ ಅವರಿಗೆ ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ.

ಜೊತೆಗೆ ಕರೀನಾ ಮಕ್ಕಳಾದ ಟಿಮ್ ಮತ್ತು ಜೆಹ್ ಹೆಸರನ್ನು ಬರೆದು ಪಿಎಂ ಆಟೋಗ್ರಾಫ್ ನೀಡಿದ್ದು, ನೆಟ್ಟಿಗರ ಗಮನ ಸೆಳೆದಿದೆ. ಜೊತೆಗೆ ಕರೀನಾ ಹಂಚಿಕೊಂಡಿರುವ ಪೋಸ್ಟ್‌ನಲ್ಲಿ ಮೋದಿರವರ ಸರಳತೆ ಮತ್ತು ಬೆಂಬಲವನ್ನು ಹಾಡಿ ಹೊಗಳಿದ್ದಾರೆ.

ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಮೋದಿಯೊಂದಿಗಿನ ಕಪೂರ್ ಫ್ಯಾಮಿಲಿ ಫೋಟೋ ವೈರಲ್ ಆಗಿದೆ.
ಇನ್ನು ಡಿಸೆಂಬರ್ 13 ರಿಂದ 15 ರವರೆಗೆ 34 ನಗರಗಳಾದ್ಯಂತ 101 ಚಿತ್ರಮಂದಿರಗಳಲ್ಲಿ , ಪಿವಿಆರ್ ಐನಾಕ್ಸ್ ಲಿಮಿಟೆಡ್ ಮತ್ತು ಫಿಲ್ಮ್ ಹೆರಿಟೇಜ್ ಫೌಂಡೇಶನ್ ಆಯೋಜಿಸಿರುವ ಚಿತ್ರೋತ್ಸವ ರಾಜ್ ಕಪೂರ್ ಅವರ ಚಿತ್ರಕಥೆಗೆ ಮೀಸಲಾಗಿದೆ.

ಈ ಸುದ್ದಿಯನ್ನೂ ಓದಿ: SM Krishna Death: ರಾಜಕೀಯ ಗುರು ಎಸ್‌ಎಂ ಕೃಷ್ಣ ಅವರನ್ನು ನೆನೆದು ನಟಿ ರಮ್ಯ ಭಾವುಕ ಪೋಸ್ಟ್‌