ಗಾಜಿಯಾಬಾದ್: ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಸೋಮವಾರ ಉತ್ತರ ಪ್ರದೇಶದ ಗಾಜಿಯಾಬಾದ್ನ ಹಿಂಡನ್ ವಾಯುನೆಲೆಯಲ್ಲಿ ಭಾರತ್ ಡ್ರೋನ್ ಶಕ್ತಿ -2023 ಪ್ರದರ್ಶನವನ್ನು ಉದ್ಘಾಟಿಸಿದರು.
ಇದೇ ಸಂದರ್ಭದಲ್ಲಿ ವಾಯುಪಡೆಗೆ ಮತ್ತಷ್ಟು ಬಲ ಎನ್ನುವಂತೆ ಸಿ-295 ಸರಕು ವಿಮಾನವನ್ನು ಸೇರ್ಪಡೆಗೊಳಿಸಿದರು.
ಐಎಎಫ್ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ವಿ.ಆರ್.ಚೌಧರಿ ಸೇರಿದಂತೆ ಉನ್ನತ ಮಿಲಿಟರಿ ಅಧಿಕಾರಿಗಳ ಸಮ್ಮುಖದಲ್ಲಿ ರಕ್ಷಣಾ ಸಚಿವರು ಸಿ -295 ಸಾರಿಗೆ ವಿಮಾನವನ್ನು ಔಪಚಾರಿಕವಾಗಿ ಭಾರತೀಯ ವಾಯುಪಡೆಗೆ ಸೇರಿತು.
ಇಂದು ಭಾರತೀಯ ವಾಯುಪಡೆಗೆ ಸೇರ್ಪಡೆಗೊಂಡಂತ ಸಿ-295 ಸರಕು ವಿಮಾನವು ಸ್ಪೇನ್ ನಿರ್ಮಿತವಾಗಿದೆ. ಇದನ್ನು ಯೋಧ ರನ್ನು ಸಾಗಿಸೋದಕ್ಕೆ, ಯುದ್ಧ ಸಾಮಗ್ರಿಗಳನ್ನು ಕೊಂಡೊಯ್ಯೋದಕ್ಕೆ ಹಾಗೂ ವೈದ್ಯಕೀಯ ವಸ್ತುಗಳನ್ನು ಸಾಗಿಸುವುದಕ್ಕೆ ಬಳಕೆ ಮಾಡಲಾಗುತ್ತದೆ.
ವಿಶೇಷವೆಂದರೆ, ದೇಶೀಯ ಡ್ರೋನ್ ವಿನ್ಯಾಸ ಮತ್ತು ಅಭಿವೃದ್ಧಿಯ ಸಾಮರ್ಥ್ಯವನ್ನು ಗುರುತಿಸಿದ ಐಎಎಫ್, ಭಾರತ್ ಡ್ರೋನ್ ಶಕ್ತಿ 2023 ಅನ್ನು ಜಂಟಿಯಾಗಿ ಆಯೋಜಿಸಲು ಡ್ರೋನ್ ಫೆಡರೇಶನ್ ಆಫ್ ಇಂಡಿಯಾದೊಂದಿಗೆ ಸಹಕರಿಸುತ್ತಿದೆ.
ಸೆಪ್ಟೆಂಬರ್ 25 ಮತ್ತು 26 ರಂದು ನಿಗದಿಯಾಗಿರುವ ಈ ಕಾರ್ಯಕ್ರಮವು ಗಾಜಿಯಾಬಾದ್‌ನ ಐಎಎಫ್’ನ ಹಿಂಡನ್ ನಡೆಯುತ್ತಿದೆ. ನೇರ ವೈಮಾನಿಕ ಪ್ರದರ್ಶನಗಳನ್ನು ಒಳಗೊಂಡಿದೆ.