Wednesday, 9th October 2024

ಅನಿಲ್ ದೇಶಮುಖ್, ನವಾಬ್ ಮಲಿಕ್‌’ಗೆ ಮತದಾನ ನಿರಾಕರಣೆ

ಮುಂಬೈ : ಆಡಳಿತಾರೂಢ ಮಹಾವಿಕಾಸ್ ಮೈತ್ರಿಕೂಟದ ಶಾಸಕರಾದ ಅನಿಲ್ ದೇಶ ಮುಖ್ ಮತ್ತು ನವಾಬ್ ಮಲಿಕ್ ಅವರನ್ನ ಸೆಷನ್ಸ್ ಕೋರ್ಟ್ ಮತದಾನಕ್ಕೆ ಅನುಮತಿ ನಿರಾಕರಿಸಿದೆ. ಶುಕ್ರವಾರ ಅರ್ಜಿ ವಿಚಾರಣೆ ನಡೆದಿದ್ದು, ಮುಂಬೈ ಹೈಕೋರ್ಟ್ ತೀರ್ಪು ನೀಡಿದೆ.

ತಕ್ಷಣವೇ ನವಾಬ್ ಮಲಿಕ್ ಅವರಿಗೆ ಮತದಾನ ಮಾಡಲು ಹೈಕೋರ್ಟ್ ಅನುಮತಿ ನಿರಾಕರಿಸಿದೆ. ಮುಂಬೈ ಸೆಷನ್ಸ್ ನ್ಯಾಯಾಲಯದ ತೀರ್ಪನ್ನು ಹೈಕೋರ್ಟ್ ಎತ್ತಿ ಹಿಡಿದಿದೆ.

ಮಹಾರಾಷ್ಟ್ರದ ಆರು ರಾಜ್ಯಸಭಾ ಸ್ಥಾನಗಳಿಗೆ ರಾಜ್ಯಸಭಾ ಚುನಾವಣೆ ನಡೆಯುತ್ತಿದೆ . ಈ ಬಾರಿಯ ಚುನಾವಣೆಯಲ್ಲಿ ಆರು ಸ್ಥಾನಗಳಿಗೆ ಏಳು ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ.

ಯಾವುದೇ ರಾಜಕೀಯ ಪಕ್ಷವು ಆರನೇ ಅಭ್ಯರ್ಥಿಯನ್ನು ಗೆಲ್ಲಲು ಅಗತ್ಯವಿರುವ ಮತಗಳನ್ನು ಹೊಂದಿಲ್ಲದಿರುವುದರಿಂದ, ಒಂದು ಸಮಯದಲ್ಲಿ ಒಂದು ಮತವು ನಿರ್ಣಾಯಕವಾಗಿದೆ.