Wednesday, 9th October 2024

ರಾಜ್ಯಸಭಾ 13 ಸ್ಥಾನಗಳಿಗೆ ನಾಳೆ ಚುನಾವಣೆ

#Rajyasabha

ನವದೆಹಲಿ: ಬಿಜೆಪಿ, ಮೇಲ್ಮನೆಯಲ್ಲೂ ಮೇಲುಗೈ ಸಾಧಿಸುವ ವಿಶ್ವಾಸದಲ್ಲಿದೆ. ಒಟ್ಟು 13 ರಾಜ್ಯಗಳಲ್ಲಿ ಮಾರ್ಚ್‌ ಹಾಗೂ ಜೂನ್‌ ನಲ್ಲಿ ರಾಜ್ಯಸಭಾ ಚುನಾವಣೆ ನಡೆಯಲಿದೆ. ಮಾ.31ರಂದು 13 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.

ಅಸ್ಸಾಂನ 1 ಸ್ಥಾನ, ಹಿಮಾಚಲ ಪ್ರದೇಶದ 2 ಸ್ಥಾನ, ಕೇರಳದ ಮೂರು, ನಾಗಾಲ್ಯಾಂಡ್‌ ನ 1 ಸ್ಥಾನ, ತ್ರಿಪುರಾದಲ್ಲಿ 1 ಸ್ಥಾನ, ಪಂಜಾಬ್‌ ನಲ್ಲಿ 5 ಸ್ಥಾನಗಳಿಗೆ ಹೊಸ ಸದಸ್ಯರ ಆಯ್ಕೆಯಾಗಲಿದೆ. ಒಟ್ಟಾರೆ 245 ಸದಸ್ಯ ಬಲದ ಮೇಲ್ಮನೆಯಲ್ಲಿ 97 ಬಿಜೆಪಿ ಸದಸ್ಯರಿ ದ್ದಾರೆ.

ಅಸ್ಸಾಂನಲ್ಲಿ, ಸಿಎಂ ಹಿಮಂತ ಬಿಸ್ವಾ ಶರ್ಮಾ ಅವರು ಎರಡೂ ಸ್ಥಾನಗಳನ್ನು ಗೆಲ್ಲುವ ವಿಶ್ವಾಸದಲ್ಲಿದ್ದಾರೆ. ಬಿಜೆಪಿಯ ಪಬಿತ್ರಾ ಮಾರ್ಗರಿಟಾ ಮತ್ತು ಪಾಲುದಾರ ಪಕ್ಷ ಯುಪಿಪಿಎಲ್ ನ ರುಂಗ್ವ್ರಾ ನರ್ಜಾರಿ ಅವರನ್ನು ಕೇಸರಿ ಪಕ್ಷ ಬೆಂಬಲಿಸಿದೆ. ಇನ್ನೊಂದೆಡೆ ರಿಪುನ್ ಬೋರಾ ಅವರನ್ನು ಕಾಂಗ್ರೆಸ್ ಅಭ್ಯರ್ಥಿಯಾಗಿ ಹೆಸರಿಸಲಾಗಿದೆ. ರಾನೀ ನಾರಾ ಮತ್ತು ರಿಪುನ್ ಬೋರಾ ಅವರ ರಾಜ್ಯ ಸಭಾ ಸ್ಥಾನಗಳು ಏಪ್ರಿಲ್ 2 ರಂದು ತೆರವಾಗಲಿವೆ.

ಕೇರಳ ರಾಜ್ಯಸಭೆಯ ಮೂರು ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ಕಾಂಗ್ರೆಸ್ ತನ್ನ ಮಹಿಳಾ ಘಟಕದ ಅಧ್ಯಕ್ಷೆ ಜೆಬಿ ಮಾಥರ್ ಅವರನ್ನು ನಾಮನಿರ್ದೇಶನ ಮಾಡಿದೆ. ಆಡಳಿತಾರೂಢ ಎಲ್‌ಡಿಎಫ್ ಸಿಪಿಐ(ಎಂ) ರಾಜ್ಯ ಸಮಿತಿ ಸದಸ್ಯ ಎ.ಎ.ರಹೀಮ್ ಮತ್ತು ಸಿಪಿಐನ ಪಿ. ಸಂತೋಷ್ ಕುಮಾರ್ ಕೂಡ ಕಣದಲ್ಲಿದ್ದಾರೆ.

ತ್ರಿಪುರಾದ ಏಕೈಕ ರಾಜ್ಯಸಭಾ ಸ್ಥಾನಕ್ಕೆ ಬಿಜೆಪಿ ತನ್ನ ರಾಜ್ಯಾಧ್ಯಕ್ಷ ಡಾ.ಮಾಣಿಕ್ ಸಹಾ ಅವರನ್ನು ನಾಮನಿರ್ದೇಶನ ಮಾಡಿದ್ದು, ಎಡರಂಗವು ಹಿರಿಯ ಸಿಪಿಐ(ಎಂ) ಮುಖಂಡ ಭಾನು ಲಾಲ್ ಸಹಾ ಅವರನ್ನು ಹೆಸರಿಸಿದೆ.

ಎಎಪಿ, ತನ್ನ ಪಂಜಾಬ್ ಉಸ್ತುವಾರಿ ರಾಘವ್ ಚಡ್ಡಾ, ಐಐಟಿ ದೆಹಲಿ ಪ್ರೊಫೆಸರ್ ಸಂದೀಪ್ ಪಾಠಕ್, ಲವ್ಲಿ ಪ್ರೊಫೆಷನಲ್ ಯೂನಿವರ್ಸಿಟಿ ಚಾನ್ಸೆಲರ್ ಅಶೋಕ್ ಮಿತ್ತಲ್, ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ ಮತ್ತು ಲುಧಿಯಾನ ಮೂಲದ ಉದ್ಯಮಿ ಸಂಜೀವ್ ಅರೋರಾ ಅವರನ್ನು ತನ್ನ ಐದು ರಾಜ್ಯಸಭಾ ನಾಮನಿರ್ದೇಶನಗಳಾಗಿ ಹೆಸರಿಸಿದೆ.

ಹಿಮಾಚಲ ಪ್ರದೇಶ: 68 ಸ್ಥಾನಗಳ ಹಿಮಾಚಲ ವಿಧಾನಸಭೆಯಲ್ಲಿ 43 ಸ್ಥಾನಗಳನ್ನು ಬಿಜೆಪಿ ಹೊಂದಿದೆ.

ನಾಗಾಲ್ಯಾಂಡ್ ಭಾರತದ ಏಕೈಕ ವಿರೋಧ ಮುಕ್ತ ರಾಜ್ಯವಾಗಿದೆ. ರಾಜ್ಯ ಬಿಜೆಪಿ ಮಹಿಳಾ ಶಾಖೆಯ ಅಧ್ಯಕ್ಷೆ ಕೊನ್ಯಾಕ್ ಅವರು ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಏಕೈಕ ಅಭ್ಯರ್ಥಿಯಾಗಿದ್ದರು.