Saturday, 5th October 2024

ರಾಜ್ಯಸಭಾ ಚುನಾವಣೆ: ’ಕೈ’ಗೆ ವಿಪಕ್ಷ ಸ್ಥಾನ ಕಳೆದುಕೊಳ್ಳುವ ಆತಂಕ

ನವದೆಹಲಿ: ಐದು ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಪ್ರಾಬಲ್ಯ ಸಾಧಿಸುವುದರೊಂದಿಗೆ ಆರು ರಾಜ್ಯಗಳಾದ್ಯಂತ 13 ರಾಜ್ಯಸಭಾ ಸ್ಥಾನಗಳಿಗೆ ನಡೆಯಲಿರುವ ಚುನಾವಣೆಯಲ್ಲಿ ಕನಿಷ್ಠ ಐದು ಸ್ಥಾನಗಳಲ್ಲಿ ಗೆಲುವಿನ ಮೇಲೆ ಕಣ್ಣಿಟ್ಟಿದೆ.

245 ಸದಸ್ಯ ಬಲದ ರಾಜ್ಯಸಭೆಯಲ್ಲಿ ಕೇಸರಿ ಪಕ್ಷವು ಪ್ರಸ್ತುತ 97 ಬಲವನ್ನು ಹೊಂದಿದೆ. ಮೇಲ್ಮನೆಗೆ ಮತ್ತೊಂದು ಸುತ್ತಿನ ದ್ವೈವಾರ್ಷಿಕ ಚುನಾವಣೆಗಳು ನಡೆಯಲಿರುವ ಜುಲೈ ವೇಳೆಗೆ ಕಾಂಗ್ರೆಸ್ ತನ್ನ ವಿಪಕ್ಷ ನಾಯಕನ ಸ್ಥಾನಮಾನ ಕಳೆದುಕೊಳ್ಳುವ ಅಪಾಯದಲ್ಲಿದೆ.

ನಿವೃತ್ತರಾಗುತ್ತಿರುವ 72 ಸದಸ್ಯರಿಗೆ ರಾಜ್ಯಸಭೆಯು ವಿದಾಯ ಹೇಳಲಿದ್ದು, ಸಭಾಪತಿ ಎಂ ವೆಂಕಯ್ಯನಾಯ್ಡು, ಪ್ರಧಾನಿ ನರೇಂದ್ರ ಮೋದಿ, ಸಭಾನಾಯಕ ಪಿಯೂಷ್ ಗೋಯಲ್ ಮತ್ತು ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೂಡ ಮಾತನಾಡಿ ಏಳು ನಾಮನಿರ್ದೇಶಿತ ಸದಸ್ಯರು ಸೇರಿದಂತೆ ಈ 72 ಸದಸ್ಯರನ್ನು ಬೀಳ್ಕೊಡಲಿದ್ದಾರೆ.