Sunday, 13th October 2024

ಹಳಿ ತಪ್ಪಿ, ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ

ಮರಾವತಿ : ಆಂಧ್ರ ಪ್ರದೇಶದ ರಾಜಮಂಡ್ರಿಯಲ್ಲಿನ ಯಾರ್ಡ್‌ನಲ್ಲಿ ರೈಲು ಹಳಿ ತಪ್ಪಿದೆ. ಹಳಿಗಳಿಂದ ಬೋಗಿಗಳನ್ನು ತೆರವು ಮಾಡಬೇಕಿರುವ ಕಾರಣ, ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಲಿದೆ.

ಬುಧವಾರ ರಾಜಮಂಡ್ರಿ ಯಾರ್ಡ್‌ನ ಎನ್‌ಎಂಜಿ ಬೋಗಿಗಳು ಹಳಿ ತಪ್ಪಿವೆ. ಇದರಿಂದಾಗಿ ದಕ್ಷಿಣ ಮಧ್ಯ ರೈಲ್ವೆ ಹಲವಾರು ರೈಲುಗಳ ಸಂಚಾರ ರದ್ದುಗೊಳಿ ಸಿದೆ. ಕೆಲವು ರೈಲುಗಳ ವೇಳಾಪಟ್ಟಿಯನ್ನು ಬದಲಾವಣೆ ಮಾಡಿದೆ.

ಒಟ್ಟು ಮೂರು ಬೋಗಿಗಳು ಹಳಿ ತಪ್ಪಿವೆ. ರೈಲ್ವೆ ಇಲಾಖೆಯ ಸಿಬ್ಬಂದಿಗಳು ಬೋಗಿಗಳನ್ನು ತೆರವುಗೊಳಿಸುವ ಕಾರ್ಯಾಚರಣೆ ಯನ್ನು ಆರಂಭಿಸಿವೆ. ಕಾರ್ಯಾಚರಣೆ ಹಲವು ಗಂಟೆಗಳ ಕಾಲ ನಡೆಯುವ ನಿರೀಕ್ಷೆ ಇದೆ.