Saturday, 14th December 2024

ರಾಮಮಂದಿರದ ವಿಚಾರದಲ್ಲಿ ಪ್ರಧಾನಿ ಮೋದಿ ಕೊಡುಗೆ ಶೂನ್ಯ: ಸುಬ್ರಹ್ಮಣ್ಯಂ ಸ್ವಾಮಿ

ವದೆಹಲಿ: ರಾಮಮಂದಿರದ ವಿಚಾರದಲ್ಲಿ ಪ್ರಧಾನಿ ಮಂತ್ರಿ ನರೇಂದ್ರ ಮೋದಿ ಅವರು ಸುಳ್ಳು ಹೇಳುತ್ತಿದ್ದಾರೆ ಎಂದು ಬಿಜೆಪಿ ಮುಖಂಡ ಸುಬ್ರಹ್ಮಣ್ಯಂ ಸ್ವಾಮಿ ಹೇಳಿದ್ದಾರೆ.

ಅಯೋಧ್ಯೆಯ ರಾಮ ಮಂದಿರ ದೇವಾಲಯದ ಕತೃ ಮತ್ತು ನಿರ್ಮಾತೃ ಎಂದು ಪ್ರಧಾನಿ ಹೇಳಿಕೊಂಡಿದ್ದಾರೆ. ಅವರ ಕೊಡುಗೆ ಶೂನ್ಯ. ಬದಲಿಗೆ ಮೋದಿ ಅವರು ಜ್ಞಾನ ವಾಪಿ ಜ್ಯೋತಿರ್ಲಿಂಗ ಕಾಶಿ ದೇವಾಲಯವನ್ನು ಮರುನಿರ್ಮಾಣ ಮಾಡಬೇಕಾದ ತಮ್ಮ ವಾರಣಾಸಿ ಕ್ಷೇತ್ರದತ್ತ ಗಮನ ಹರಿಸಬೇಕು ಎಂದು ಹೇಳಿದ್ದಾರೆ.

ಅಯೋಧ್ಯೆಯಲ್ಲಿ ರಾಮಲಲ್ಲಾಪ್ರತಿಷ್ಠಾಪನಾ ಸಮಾರಂಭ ನಡೆಯಲಿದ್ದು, ಪ್ರಧಾನಿ ಮೋದಿ ಸೇರಿದಂತೆ ಹಲವು ಪ್ರಮುಖ ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.