ರಂಜಾನ್ ಹಬ್ಬದ ಪ್ರಯುಕ್ತ ವಂಡರ್‌ಲಾ ವಿಶೇಷ ಕೊಡುಗೆ ಘೊಷಿಸಿದ್ದು, ಬಿರಿಯಾನಿ ಹಾಗೂ ಟಿಕೆಟ್ ಕೇವಲ ರೂ.1899 ರೂ. ಕೊಡುಗೆ ಇದಾಗಿದೆ. ಈ ಸೀಮಿತ ಟಿಕೆಟ್ ಆಫರ್ ಏಪ್ರಿಲ್ 11 ರಿಂದ 14 ರವರೆಗೆ ಇರಲಿದ್ದು, ಈ ಕೊಡುಗೆಯು ಆನ್‌ಲೈನ್ ನಲ್ಲಿ ಬುಕ್ಕಿಂಗ್ ಮಾಡಿಕೊಳ್ಳುವವರಿಗೆ ಮಾತ್ರ ಲಭ್ಯವಾಗಲಿದೆ. ಸಾರ್ವಜನಿಕರು ತಮ್ಮ ಟಿಕೆಟ್‌ಗಳನ್ನು ಏಪ್ರಿಲ್ 3 ರಿಂದಲೇ ಮುಂಗಡ ಬುಕ್ಕಿಂಗ್ ಮಾಡಿಕೊಳ್ಳಬಹುದು.
ಇನ್ನು, ವಿದ್ಯಾರ್ಥಿಗಳಿಗೂ ಸಹ ವಂಡರ್‌ಲಾ ಹಾಲ್‌ಟಿಕೆಟ್ ಆಫರ್ ನೀಡುತ್ತಿದೆ. ಹಾಲ್ ಟಿಕೆಟ್ ಕೊಡುಗೆಯು 2023-2024 ಶೈಕ್ಷಣಿಕ ವರ್ಷದ 10ನೇ, 11ನೇ ಮತ್ತು 12ನೇ ತರಗತಿ ಪರೀಕ್ಷೆ ಬರೆದ ಎಲ್ಲಾ ವಿದ್ಯಾರ್ಥಿಗಳಿಗೂ ಲಭ್ಯವಿರಲಿದೆ. ತಮ್ಮ ಪರೀಕ್ಷೆಯ ಹಾಲ್ ಟಿಕೆಟ್‌ಗಳನ್ನು ಪ್ರಸ್ತುತಪಡಿಸುವ ಮೂಲಕ, ವಿದ್ಯಾರ್ಥಿಗಳು ವಂಡರ್‌ಲಾ ಪಾರ್ಕ್ ಪ್ರವೇಶ ಟಿಕೆಟ್‌ಗಳಲ್ಲಿ ಶೇ.35ರಷ್ಟು ರಿಯಾಯಿತಿಯನ್ನು ಪಡೆಯಬಹುದು. ಈ ಕೊಡುಗೆಯನ್ನು ಆನ್‌ಲೈನ್ ಮತ್ತು ಆಫ್‌ಲೈನ್‌ನಲ್ಲಿ ಯೂ ಸಹ ಪಡೆಯಬಹುದು.
ಆದರೆ ವಿದ್ಯಾರ್ಥಿಗಳು ಪ್ರವೇಶಿಸುವ ಮೊದಲು ತಮ್ಮ ಪ್ರಸ್ತುತ ವರ್ಷದ ಹಾಲ್ ಟಿಕೆಟ್ ಅನ್ನು ಪಾರ್ಕ್‌ನಲ್ಲಿ ಪ್ರದರ್ಶಿಸಬೇಕು.
ವಂಡರ್‌ಲಾ ಬೆಂಗಳೂರು ಕಾಲೇಜು ವಿದ್ಯಾರ್ಥಿಗಳಿಗೆ 6ನೇ ಏಪ್ರಿಲ್ 2024 ರಿಂದ ಮನೋರಂಜನೆ ಪಡೆಯಲು ವಿಶೇಷ ಕಾಂಬೊ ಕೊಡುಗೆಯನ್ನು ಪ್ರಕಟಿಸಿದೆ. ಕೇವಲ 1,550 ರೂಪಾಯಿಗಳಿಂದ ಪ್ರಾರಂಭವಾಗುವ ಕೊಡುಗೆಯಲ್ಲಿ, ವಿಶೇಷ ಆಹಾರದೊಂದಿಗೆ ಪಾರ್ಕ್ ಪ್ರವೇಶ ಕೂಡ ಒಳಗೊಂಡಿರಲಿದೆ. ಇದು ಆನ್‌ಲೈನ್ ಮತ್ತು ಆಫ್‌ಲೈನ್ ಬುಕಿಂಗ್‌ಗಳಲ್ಲಿ ಲಭ್ಯವಿದೆ. 16 ರಿಂದ 24 ವರ್ಷ ವಯಸ್ಸಿನ ವಿದ್ಯಾರ್ಥಿಗಳು ಆಫರ್ ಅನ್ನು ಪಡೆಯಬಹುದು ಮತ್ತು ಪಾರ್ಕ್ ಪ್ರವೇಶದ ಸಮಯದಲ್ಲಿ ಕೊಡುಗೆಯನ್ನು ಪಡೆಯಲು ತಮ್ಮ ಕಾಲೇಜು ID ಕಾರ್ಡ್ ಅನ್ನು ಕಡ್ಡಾಯವಾಗಿ ಪ್ರದರ್ಶಿಸಬೇಕು.
Wonderla ಸಂದರ್ಶಕರನ್ನು ಆನ್‌ಲೈನ್ ಪೋರ್ಟಲ್ ಮೂಲಕ https://bookings.wonderla.com/ ನಲ್ಲಿ ಮುಂಗಡವಾಗಿ ತಮ್ಮ ಪ್ರವೇಶ ಟಿಕೆಟ್‌ಗಳನ್ನು ಬುಕ್ ಮಾಡಬಹುದು ಅಥವಾ ಗ್ರಾಹಕರು ನೇರವಾಗಿ ಪಾರ್ಕ್ ಕೌಂಟರ್‌ಗಳಿಂದ ಟಿಕೆಟ್‌ಗಳನ್ನು ಖರೀದಿಸಬಹುದು ಅಥವಾ ಬೆಂಗಳೂರು ಪಾರ್ಕ್ – +91 80372 30333, +91 80350 73966 ಅನ್ನು ಸಂಪರ್ಕಿಸಬಹುದು.