Friday, 13th December 2024

ಮಹಿಳೆಯ ಮೇಲೆ ನಕಲಿ ಬಾಬಾನಿಂದ ಅತ್ಯಾಚಾರ

ಹೈದರಾಬಾದ್ : ಎಂಥ ಕಾಯಿಲೆಯನ್ನಾದರೂ ಗುಣಪಡಿಸುತ್ತೇನೆ ಎಂದು ಹೇಳಿಕೊಂಡ ನಕಲಿ ಬಾಬಾ ಇಡೀ ರಾತ್ರಿ ಮಹಿಳೆಯೊಬ್ಬರ ಮೇಲೆ ಲೈಂಗಿಕ ದೌರ್ಜ ನ್ಯ ನಡೆಸಿದ್ದು ಸೈಬರಾಬಾದ್ ಪೊಲೀಸರು ಆತನನ್ನು ಬಂಧಿಸಿದ್ದಾರೆ.

ಅರ್ಷದ್ ಜಲಾವುದ್ದೀನ್ (45) ನಕಲಿ ಬಾಬಾ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಮೂಲತಃ ಕರ್ನಾಟಕ ಮೂಲದ ಅರ್ಷದ್ ಪ್ರಾರ್ಥನೆ ಮತ್ತು ಮಾಟದಿಂದ ಯಾವುದೇ ಅನಾರೋಗ್ಯವನ್ನು ಗುಣಪಡಿಸುತ್ತೇನೆ ಎಂದು ನಂಬಿ ಸುವ ಕೆಲಸ ಮಾಡುತ್ತಿದ್ದ. ಮಹಿಳೆಯೊಬ್ಬಳೂ ತನ್ನ ಮೇಲೆ ನಕಲಿ ಬಾಬಾ ಅತ್ಯಾಚಾರ ವೆಸಗಿದ್ದಾನೆ ಎಂದು ದೂರು ಸಲ್ಲಿಸಿದ್ದಳು, ನಾಪತ್ತೆಯಾಗಿದ್ದವ ಸಿಕ್ಕಿಬಿದ್ದಿದ್ದಾನೆ.

ಮಗುವಿಗೆ ಜನ್ಮ ನೀಡಿದ ನಂತರ ಮಹಿಳೆ ಅನಾರೋಗ್ಯಕ್ಕೆ ಒಳಗಾಗಿದ್ದಳು. ಎಷ್ಟೇ ಚಿಕಿತ್ಸೆ ಪಡೆದರೂ ಅವಳು ಗುಣಮುಖವಾಗಲಿಲ್ಲ ವಾದ್ದರಿಂದ, ಅರ್ಷದ್ ನನ್ನು ಸಂಪರ್ಕಿಸಿ ಗುಣಮುಖ ಮಾಡಬೇಕು ಎಂದು ಕೇಳಿಕೊಂ ಡಿದ್ದರು. ಅವಕಾಶ ಬಳಸಿಕೊಂಡ ನಕಲಿ ಬಾಬಾ ಪೂಜೆಯ ಹೆಸರಿನಲ್ಲಿ ಮಹಿಳೆಯ ಮನೆಗೆ ಮಧ್ಯರಾತ್ರಿ ತೆರಳಿ ಕೋಣೆಗೆ ಕರೆದೊಯ್ದು ಮಹಿಳೆಯ ಪ್ರಜ್ಞೆ ತಪ್ಪಿಸಿದ್ದಾನೆ.

ಮಹಿಳೆಯ ಅನುಭವಕ್ಕೆ ವಿಚಾರ ಬಂದ ನಂತರ ಆಕೆ ದೂರು ದಾಖಲಿಸಿದ್ದರು. ಬಂಧಿಸಲು ತೆರಳಿದ್ದಾಗ ಎರಡು ಸಾರಿ ತಪ್ಪಿಸಿಕೊಂಡಿದ್ದ. ಈಗ ಖಚಿತ ಮಾಹಿತಿ ಆಧರಿಸಿ ದಾಳಿ ಮಾಡಿದಾಗ ಸಿಕ್ಕಿಬಿದ್ದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.