Saturday, 14th December 2024

ಮಾಜಿ ಸಚಿವರ ವಿರುದ್ದ ಅತ್ಯಾಚಾರ ಆರೋಪ, ದೂರು ದಾಖಲು

ಚೆನ್ನೈ: ಎಐಎಡಿಎಂಕೆ ಮಾಜಿ ಸಚಿವ ಎಂ.ಮಣಿಕಂದನ್ ವಿರುದ್ಧ ದೂರು ದಾಖಲಾಗಿದೆ. ತಮಿಳು ಚಿತ್ರನಟಿ ನೀಡಿದ ಅತ್ಯಾ ಚಾರ ದೂರಿನ ಆರೋಪದ ಮೇಲೆ ಮಾಜಿ ಸಚಿವರು ವಿವಾಹದ ನೆಪದಲ್ಲಿ ತನ್ನನ್ನು ಮೋಸ ಮಾಡಿರುವುದಾಗಿ ನಟಿ ದೂರಿನಲ್ಲಿ ಆರೋಪಿಸಿದ್ದಾರೆ.

ಅತ್ಯಾಚಾರದ ಹೊರತಾಗಿ ಮಾಜಿ ಸಚಿವ ಮಣಿಕಂದನ್ ವಿರುದ್ಧ ಚೆನ್ನೈನ ಅಡ್ಯಾರ್ ಆಲ್ ವುಮೆನ್ ಪೊಲೀಸರು ಐಪಿಸಿ ಕಾಯ್ದೆ ಯಡಿ ಕ್ರಿಮಿನಲ್ ಬೆದರಿಕೆ, ಮಹಿಳೆಯ ಒಪ್ಪಿಗೆ ಇಲ್ಲದೆ ಗರ್ಭಪಾತ ಮಾಡಿಸಿರುವ ಬಗ್ಗೆ ಪ್ರಕರಣ ದಾಖಲಿಸಿದ್ದಾರೆ.

ಮಾಜಿ ಸಚಿವ ಮಣಿಕಂದನ್ ಕಳೆದ ಐದು ವರ್ಷಗಳಿಂದ ತನ್ನ ಜತೆ ಸಂಬಂಧ ಹೊಂದಿರುವುದಾಗಿ ನಟಿ ದೂರಿನಲ್ಲಿ ತಿಳಿಸಿ ದ್ದಾರೆ. ತಾನು ಗರ್ಭಿಣಿಯಾದಾಗ ಬಲವಂತದಿಂದ ಗರ್ಭಪಾತ ಮಾಡಿಸಿರುವುದಾಗಿಯೂ ದೂರಿನಲ್ಲಿ ಆರೋಪಿಸಲಾಗಿದೆ.