Saturday, 14th December 2024

ನಾಲ್ವರು ಮಹಿಳೆಯರ ಮೇಲೆ ಸಾಮೂಹಿಕ ಅತ್ಯಾಚಾರ

ಪಾಣಿಪತ್: ಪಾಣಿಪತ್ ಜಿಲ್ಲೆಯಲ್ಲಿ ಮಟ್ಲೌಡಾ ರಿಫೈನರಿ ರಸ್ತೆಯ ಎರಡು ಶಿಬಿರಗಳಲ್ಲಿ ನಾಲ್ವರು ದರೋಡೆ ಕೋರರು ಬಂದೂಕಿನಿಂದ ಬೆದರಿಸಿ ನಾಲ್ವರು ಮಹಿಳೆಯರ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ.

ದರೋಡೆಕೋರರು ಮಟ್ಲೌಡಾ ಪೊಲೀಸ್ ಠಾಣಾ ವ್ಯಾಪ್ತಿಯ ಕ್ಯಾಂಪ್‌ಗೆ ನುಗ್ಗಿ ಅಲ್ಲಿದ್ದ ಎಲ್ಲರನ್ನೂ ಒತ್ತೆಯಾ ಳಾಗಿರಿಸಿದ್ದರು. ನಂತರ ಶಿಬಿರವನ್ನು ಲೂಟಿ ಮಾಡಿದ್ದಾರೆ. ಕುಟುಂಬಸ್ಥರ ಎದುರೇ ಮೂವರು ಮಹಿಳೆಯರ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ.

ಶಿಬಿರದ ಜನರನ್ನು ಲೂಟಿಗೈದ ಬಳಿಕ ಅಲ್ಲಿಂದ ಸ್ವಲ್ಪ ದೂರದಲ್ಲಿ ಕಳ್ಳರು ಮೀನು ಸಾಕಣೆ ಕೇಂದ್ರವನ್ನು ಗುರಿಯಾಗಿಸಿಕೊಂಡರು. ಮೀನು ಸಾಕಾಣಿಕೆ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದ ಗಂಡ-ಹೆಂಡತಿಯನ್ನು ಒತ್ತೆಯಾಳಾಗಿಟ್ಟುಕೊಂಡ ಕಳ್ಳರು, ನಗದು ಹಾಗೂ ಚಿನ್ನಾಭರಣ ದೋಚಿದ್ದರು. ಬಳಿಕ ರಾತ್ರಿಯಿಡೀ ಮಹಿಳೆಯ ಮೇಲೆ ದರೋಡೆಕೋರರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ.

ಸಂತ್ರಸ್ತರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿ ಸಂತ್ರಸ್ತರ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡರು.

ರಿಫೈನರಿ ಬಳಿ ಕ್ಯಾಂಪ್​ಗೆ ನುಗ್ಗಿದ ದರೋಡೆಕೋರರು ಅಲ್ಲಿದ್ದ ಎಲ್ಲರನ್ನೂ ಕಟ್ಟಿಹಾಕಿ ಲೂಟಿ ಮಾಡಿದ್ದಾರೆ. ಮಹಿಳೆಯರ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ.