Wednesday, 11th December 2024

ಅತ್ಯಾಚಾರ ಸಂತ್ರಸ್ತೆಯೊಂದಿಗೆ ಮೊಬೈಲ್‌ನಲ್ಲಿ ಅಶ್ಲೀಲ ಮಾತು: ತನಿಖಾಧಿಕಾರಿ ಅಮಾನತು

ಸಂಭಾಲ್: ಉತ್ತರ ಪ್ರದೇಶದ ಸಂಭಾಲ್​ ಜಿಲ್ಲೆಯಲ್ಲಿ ಅತ್ಯಾಚಾರ ಸಂತ್ರಸ್ತ ಯುವತಿ ಯೊಂದಿಗೆ ಮೊಬೈಲ್‌ನಲ್ಲಿ ಅಶ್ಲೀಲವಾಗಿ ಮಾತನಾಡಿದ ಆರೋಪದ ಮೇಲೆ ಅಪರಾಧ ವಿಭಾಗದ ಪೊಲೀಸ್​ ಇನ್ಸ್​​ಪೆಕ್ಟರ್​ವೊಬ್ಬರನ್ನು ಅಮಾನತುಗೊಳಿಸಲಾಗಿದೆ.

ಪೊಲೀಸ್​ ಅಧಿಕಾರಿಯ ಅಶ್ಲೀಲ ಸಂಭಾಷಣೆಯ ಎರಡು ಆಡಿಯೋಗಳು ವೈರಲ್​ ಆಗಿದ್ದು, ಈ ಪ್ರಕರಣದ ಹೆಚ್ಚಿನ ತನಿಖೆ ಯನ್ನು ಹೆಚ್ಚುವರಿ ಎಸ್​ಪಿ​ಗೆ ವಹಿಸಲಾಗಿದೆ.

ಇಲ್ಲಿನ ಗುನ್ನೌರ್ ಪೊಲೀಸ್​ ಠಾಣೆಯಲ್ಲಿ ಕಳೆದ ಜೂನ್‌ನಲ್ಲಿ ನಡೆದ ಯುವತಿಯೊಬ್ಬಳ ಮೇಲಿನ ಅತ್ಯಾಚಾರ ಪ್ರಕರಣ ದಾಖಲಾ ಗಿತ್ತು. ಈ ಪ್ರಕರಣದ ತನಿಖೆಯನ್ನು ಠಾಣೆಯ ಕ್ರೈಂ ಇನ್ಸ್​​ಪೆಕ್ಟರ್ ಅಶೋಕ್ ಕುಮಾರ್ ನಡೆಸುತ್ತಿದ್ದರು. ಆದರೆ, ತನಿಖಾಧಿಕಾರಿ ಅಶೋಕ್ ಕುಮಾರ್ ವರದಿಯನ್ನು ಸಿದ್ಧಪಡಿಸುವ ನೆಪದಲ್ಲಿ ನೊಂದ ಯುವತಿಗೆ ವಿನಾ ಕಾರಣ ಹಲವು ಬಾರಿ ವಿಚಾರಣೆ ನಡೆಸಿ ದ್ದಾರೆ ಎಂದು ಸಂತ್ರಸ್ತೆಯ ಕುಟುಂಬ ಆರೋಪಿ ಸಿದೆ.

ಅಷ್ಟೇ ಅಲ್ಲ, ಮೊಬೈಲ್ ಫೋನ್​ನಲ್ಲಿ ವೈದ್ಯಕೀಯ ವಿಚಾರಣೆಯ ಹೆಸರಲ್ಲಿ ಸಂತ್ರಸ್ತೆಗೆ ಅನೇಕ ಅಶ್ಲೀಲ ಪ್ರಶ್ನೆಗಳನ್ನು ಕೇಳಲಾ ಗುತ್ತಿತ್ತು. ಆ ಪ್ರಶ್ನೆಗಳಿಗೆ ಸಂತ್ರಸ್ತೆ ಉತ್ತರಿಸಲು ಸಾಧ್ಯವಾಗುತ್ತಿರಲಿಲ್ಲ.

ಇನ್ಸ್‌ಪೆಕ್ಟರ್​ ಅಶೋಕ್ ಕುಮಾರ್​​ ವಾಟ್ಸ್​​ಆಯಪ್ ಕರೆ ಮಾಡುವಂತೆಯೂ ಅತ್ಯಾಚಾರ ಸಂತ್ರಸ್ತೆಗೆ ಒತ್ತಡ ಹೇರಿದ್ದರು ಎಂದು ಕುಟುಂಬಸ್ಥರು ದೂರಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ 1 ನಿಮಿಷ 58 ಸೆಕೆಂಡುಗಳ ಒಂದು ಆಡಿಯೋ ಮತ್ತು 1 ನಿಮಿಷ 10 ಸೆಕೆಂಡುಗಳ ಮತ್ತೊಂದು ಆಡಿಯೋ ಹರಿದಾಡುತ್ತಿದೆ.