Friday, 13th December 2024

ಪಶ್ಚಿಮ ಬಂಗಾಳದ ಸಚಿವ ರಥಿನ್​ ಘೋಷ್​ ಮನೆ ಮೇಲೆ ಇಡಿ ದಾಳಿ

ಕೋಲ್ಕತ್ತಾ: ಪಾಲಿಕೆ ನೇಮಕಾತಿ ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಮಮತಾ ಬ್ಯಾನರ್ಜಿ ಸರ್ಕಾರದ ಆಹಾರ ಸಚಿವ ರಥಿನ್ ಘೋಷ್ ಮನೆ ಮೇಲೆ ಇಡಿ ದಾಳಿ ನಡೆಸಿದೆ.

ಚೆನ್ನೈ:  ಸಂಸದ ಹಾಗೂ ಕೇಂದ್ರ ಮಾಜಿ ಸಚಿವ ಜಗತ್ ರಕ್ಷಕನ್ ಆಸ್ತಿ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿ ಗಳು ದಾಳಿ ಮಾಡಿದ್ದು ತನಿಖೆ ನಡೆಸುತ್ತಿದ್ದಾರೆ.

ಜಗತ್ ರಕ್ಷಕನ್ ಅವರಿಗೆ ಸಂಬಂಧಿಸಿದ 40 ಸ್ಥಳಗಳಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದು, ತಪಾಸಣೆ ಮಾಡುತ್ತಿದ್ದಾರೆ.

ದಿ.ನಗರ, ಅಡ್ಯಾರ್, ಕ್ರೋಂಬೆಟ್ಟೈ, ತಾಂಬರಂ, ಪೂಂತಮಲ್ಲಿಗೆ ಸೇರಿದಂತೆ ಚೆನ್ನೈ ಹಾಗೂ ಉಪನಗರ ಪ್ರದೇಶ ಗಳಲ್ಲಿ ಸಂಸದರಿಗೆ ಸಂಬಂಧಿಸಿದ ಶಿಕ್ಷಣ ಸಂಸ್ಥೆಗಳು ಮತ್ತು ಕಚೇರಿಗಳ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸುತ್ತಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಜೊತೆಗೆ ಅಡ್ಯಾರ್ ಪ್ರದೇಶದಲ್ಲಿ ಜಗತ್ರಾಜಕನ ವೇದಿಕೆ ಮತ್ತು ತಾಂಬರಂ ಪ್ರದೇಶದಲ್ಲಿ ಭಾರತ್ ವಿಶ್ವವಿದ್ಯಾಲಯ ಕಾಲೇಜು, ಪಲ್ಲವರಂನ ವೇಲಾ ಆಸ್ಪತ್ರೆ, ಪೂಂತಮಲ್ಲಿ ಸವಿತಾ ಆಸ್ಪತ್ರೆ, ಪಲ್ಲಿಕರಣೈ ಬಾಲಾಜಿ ವೈದ್ಯಕೀಯ ಕಾಲೇಜು, ಟಿ.ನಗರದ ಅಕಾರ್ಡ್ ನಕ್ಷತ್ರ ಹೋಟೆಲ್ ಸೇರಿದಂತೆ ಸ್ಥಳಗಳಲ್ಲಿ ಆದಾಯ ತೆರಿಗೆ ಅಧಿಕಾರಿಗಳು ಬೆಳಗ್ಗೆಯಿಂದಲೇ ತಪಾಸಣೆ ನಡೆಸುತ್ತಿದ್ದಾರೆ.

ಹಾಗೆ ಪರೀಕ್ಷಾ ಕೇಂದ್ರಗಳಲ್ಲಿ ಸುಮಾರು 1,000 ಶಸ್ತ್ರಸಜ್ಜಿತ ಪೊಲೀಸರನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ. ಅವರ ಕಚೇರಿಗಳು ಮತ್ತು ಶಿಕ್ಷಣ ಸಂಸ್ಥೆ ಗಳಿಗೆ ಸಂಬಂಧಿಸಿದ ಸ್ಥಳಗಳಲ್ಲಿ ಆದಾಯ ತೆರಿಗೆ ಅಧಿಕಾರಿಗಳು ಈಗಾಗಲೇ ದಾಳಿ ನಡೆಸಿದ್ದು, ಈ ಬೆನ್ನಲೆ ಇಂದು ಕೂಡ 40ಕ್ಕೂ ಹೆಚ್ಚು ಸ್ಥಳಗಳಲ್ಲಿ ತಪಾಸಣೆ ನಡೆಸುತ್ತಿದ್ದಾರೆ.

ಅವರು ಅರಕ್ಕೋಣಂ ಸಂಸದೀಯ ಸ್ಥಾನಕ್ಕೆ ಮೂರು ಬಾರಿ ಸ್ಪರ್ಧಿಸಿ ಗೆದ್ದಿದ್ದಾರೆ. ಉತ್ತರಮೇರೂರು ವಿಧಾನಸಭಾ ಕ್ಷೇತ್ರಕ್ಕೂ ಸ್ಪರ್ಧಿಸಿ ಗೆದ್ದಿದ್ದಾರೆ. ಪ್ರಸ್ತುತ ಸಂಸದರಾಗಿ ಅವರು ಸೇವೆ ಸಲ್ಲಿಸುತ್ತಿದ್ದಾರೆ.