Saturday, 14th December 2024

ಶಾಸಕ ರವಿ ರಾಣಾ, ಸಂಸದೆ ನವನೀತ್ ದಂಪತಿಗೆ ಜಾಮೀನು ಮಂಜೂರು

ಮುಂಬೈ: ಮಹಾರಾಷ್ಟ್ರ ಮುಖ್ಯಮಂತ್ರಿ ನಿವಾಸದೆದುರು ಹನುಮಾನ್ ಚಾಲೀಸಾ ಪಠಿಸುವುದಾಗಿ ಹೇಳಿ ಬಂಧನಕ್ಕೊಳಗಾಗಿದ್ದ ಪಕ್ಷೇತರ ಶಾಸಕ ರವಿ ರಾಣಾ ಹಾಗೂ ಸಂಸದೆ ನವನೀತ್ ಕೌರ್ ರಾಣಾ ದಂಪತಿಗೆ ಜಾಮೀನು ಮಂಜೂರು ಆಗಿದೆ.

ಏಪ್ರಿಲ್ 23ರಂದು ಬಂಧನಕ್ಕೊಳಗಾಗಿದ್ದ ರಾಣಾ ದಂಪತಿ ವಿರುದ್ದ ದೇಶದ್ರೋಹ ಪ್ರಕರಣವನ್ನ ಪೊಲೀಸರು ದಾಖಲಿಸಿದ್ದರು. ಹಾಗೂ ಮುಂಬೈ ಮೆಟ್ರೋಪಾಲಿಟನ್ ನ್ಯಾಯಾಲಯ ದಂಪತಿಗಳನ್ನು 14ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತ್ತು.

ದಂಪತಿಗಳ ಪರ ವಕೀಲರು ಬಂಧನ ಪ್ರಶ್ನಿಸಿ ಸೆಷನ್ಸ್ ಕೋರ್ಟ್ಗೆ ಮನವಿ ಸಲ್ಲಿಸಿದ್ದರು. ಮನವಿ ಪುರಸ್ಕರಿಸಿದ್ದ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.