Wednesday, 11th December 2024

ಹಿ.ಪ್ರದೇಶ ಹೈಕೋರ್ಟ್‌ ಸಿಜೆ ಆಗಿ ಕರ್ನಾಟಕದ ರವಿ ವಿಜಯಕುಮಾರ್ ಮಳಿಮಠ್ ನೇಮಕ

ನವದೆಹಲಿ : ಕರ್ನಾಟಕ ಮೂಲದ ರವಿ ವಿಜಯಕುಮಾರ್ ಮಳಿಮಠ್ ಅವರು ಹಿಮಾಚಲ ಪ್ರದೇಶ ಹೈಕೋರ್ಟ್‍ನ ಮುಖ್ಯ ನ್ಯಾಯಮೂರ್ತಿಯಾಗಿ ನಿಯೋಜನೆ ಗೊಂಡಿದ್ದಾರೆ.

ಅದೇ ಹೈಕೋರ್ಟ್‍ನ ನ್ಯಾಯಮೂರ್ತಿಗಳಾಗಿ ಸೇವೆ ಸಲ್ಲಿಸುತ್ತಿರುವ ಹಿರಿಯ ನ್ಯಾಯಮೂರ್ತಿ ಮಳಿಮಠ್ ಅವರನ್ನು ಮುಖ್ಯ ನ್ಯಾಯಮೂರ್ತಿಗಳ ನ್ನಾಗಿ ನಿಯೋಜನೆ ಮಾಡಲಾಗಿದೆ ಎಂದು ಕಾನೂನು ಸಚಿವಾಲಯ ಹೇಳಿದೆ.

ಮುಖ್ಯ ನ್ಯಾಯಮೂರ್ತಿ ಲಿಂಗಪ್ಪ ನಾರಾಯಣಸ್ವಾಮಿ ಅವರ ನಿವೃತ್ತಿಯಿಂದ ತೆರವಾಗಲಿರುವ ಸ್ಥಾನಕ್ಕೆ ಮಳಿಮಠ್ ರನ್ನು ನೇಮಕ ಮಾಡಲಾಗಿದ್ದು, ಜುಲೈ ಒಂದರಿಂದ ಸಿಜೆಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ರವಿ ವಿಜಯಕುಮಾರ್ ಮಳಿಮಠ್ ಅವರು ರಾಜ್ಯದ ಹಿರಿಯ ನ್ಯಾಯಮೂರ್ತಿಗಳಾಗಿದ್ದ ಎಸ್.ಎಸ್.ಮಳೀಮಠ್ ಅವರ ಪುತ್ರ.