Saturday, 14th December 2024

ಕೇಂದ್ರ ಸಚಿವ ರವಿ ಶಂಕರ್ ಪ್ರಸಾದ್ ಖಾತೆ ನಿರ್ಬಂಧಿಸಿದ ಟ್ವಿಟ್ಟರ್‌

ನವದೆಹಲಿ : ಹಲವು ನಾಯಕರ ಟ್ವಿಟ್ಟರ್ ಖಾತೆಯನ್ನ ಬ್ಲೂ ಟಿಕ್ ತೆಗೆದು ಹಾಕಿ, ವಿವಾದಕ್ಕೆ ಈಡಾಗಿದ್ದ ಟ್ವಿಟ್ಟರ್, ಈಗ ಕೇಂದ್ರ ಪ್ರಸಾರ ಖಾತೆ ಸಚಿವ ರವಿ ಶಂಕರ್ ಪ್ರಸಾದ್ ಅವರ ಖಾತೆಗೆ ಪ್ರವೇಶವನ್ನು ನಿರಾಕರಿಸಿದೆ.

ಈ ಕುರಿತಂತೆ ಮತ್ತೊಂದು ಸಾಮಾಜಿಕ ಮಾಧ್ಯಮದಲ್ಲಿ ಮಾಹಿತಿ ಹಂಚಿಕೊಂಡಿರುವ ಸಚಿವ ರವಿಶಂಕರ್ ಪ್ರಸಾದ್, ಟ್ವಿಟ್ಟರ್ ನನ್ನ ಖಾತೆಯನ್ನು ಪ್ರವೇಶಿಸುವು ದಕ್ಕೆ ನಿರ್ಬಂಧಿಸಿದೆ. ಈ ಬಗ್ಗೆ ವಿಚಾರಿಸಿದಾಗ ತಾವು ಯುಎಸ್‌ಎಯ ಡಿಜಿಟಲ್ ಮಿಲೇನಿಯಂ ಕೃತಿಸ್ವಾಮ್ಯ ಕಾಯ್ದೆಯ ಉಲ್ಲಂಘನೆಯಾಗಿದೆ ಎಂಬುದಾಗಿ ತಿಳಿಸಿದೆ ಎಂದಿದ್ದಾರೆ.

ಖಾತೆ ನಿರ್ಬಂಧದಿಂದಾಗಿ, ಕೇಂದ್ರ ಐಟಿ ಸಚಿವರೇ, ಸುಮಾರು ಒಂದು ಗಂಟೆಗೂ ಹೆಚ್ಚುಕಾಲ ತಮ್ಮ ಟ್ವಿಟ್ಟರ್ ಖಾತೆಯನ್ನು ಪ್ರವೇಶಿಸಲು ಸಮಸ್ಯೆ ಆಗಿರುವು ದಾಗಿ ಮಾಹಿತಿ ಹಂಚಿಕೊಂಡಿದ್ದಾರೆ.