Friday, 13th December 2024

ಅಕ್ಟೋಬರ್ 4ರಿಂದ ಮಾನಿಟರಿ ಪಾಲಿಸಿ ಕಮಿಟಿ ಸಭೆ

ನವದೆಹಲಿ: ಅಕ್ಟೋಬರ್ 4ರಿಂದ ರ್​ಬಿಐನ ಆರು ಸದಸ್ಯರ ಮಾನಿಟರಿ ಪಾಲಿಸಿ ಕಮಿಟಿ ಸಭೆ ಸೇರಲಿದ್ದು, ರೆಪೋ ದರ ಇತ್ಯಾದಿ ವಿಚಾರಗಳನ್ನು ಚರ್ಚಿಸಲಿದೆ. ಅಕ್ಟೋಬರ್ ೬ರಂದು ಎಂಪಿಸಿ ಸಭೆಯ ನಿರ್ಧಾರಗಳನ್ನು ಆರ್​ಬಿಐ ಗವರ್ನರ್ ಶಕ್ತಿಕಾಂತ ದಾಸ್ ಪ್ರಕಟಿಸಲಿದ್ದಾರೆ.
ರೆಪೋ ದರ ಯಥಾಸ್ಥಿತಿ ಜೊತೆಗೆ ಹಣದ ಸರಬರಾಜನ್ನು ಕಡಿಮೆಗೊಳಿಸುವ ನಿಲುವನ್ನು ಆರ್​ಬಿಐ ಮುಂದು ವರಿಸುವ ನಿರೀಕ್ಷೆ ಇದೆ.

ಭಾರತೀಯ ರಿಸರ್ವ್ ಬ್ಯಾಂಕ್​ನ ದ್ವೈಮಾಸಿಕ ಎಂಪಿಸಿ ಸಭೆ ನಾಳೆಯಿಂದ ನಡೆಯಲಿದೆ. ಮೂರು ದಿನಗಳ ಕಾಲ ನಡೆಯುವ ಮಾನಿಟರಿ ಪಾಲಿಸಿ ಕಮಿಟಿ ಸಭೆಯಲ್ಲಿ (RBI MPC Meeting) ಪ್ರಸಕ್ತ ಹಣಕಾಸು ಪರಿಸ್ಥಿತಿ ಮತ್ತು ಮುಂದಿನ ಹಣಕಾಸು ನಿರ್ಧಾರಗಳ ಬಗ್ಗೆ ಚರ್ಚೆ ನಡೆಯಲಿದೆ.

ಸಭೆ ಮುಗಿದ ಬಳಿಕ, ಅಕ್ಟೋಬರ್ 6 ಶುಕ್ರವಾರ ಆರ್​ಬಿಐ ಗವರ್ನರ್ ಶಕ್ತಿಕಾಂತ ದಾಸ್ ಎಂಪಿಸಿ ಸಭೆಯ ನಿರ್ಧಾರಗಳನ್ನು ಪ್ರಕಟಿಸಲಿದ್ದಾರೆ.

ಸಾಮಾನ್ಯವಾಗಿ ಎಂಪಿಸಿ ಸಭೆಯಲ್ಲಿ ರೆಪೋ ದರ ಅಥವಾ ಬಡ್ಡಿದರ ವಿಚಾರವಾಗಿ ತೆಗೆದುಕೊಳ್ಳುವ ನಿರ್ಧಾರದ ಮೇಲೆ ಹೆಚ್ಚಿನ ಮಂದಿಯ ಗಮನ ಇರುತ್ತದೆ. ವಿವಿಧ ಬ್ಯಾಂಕುಗಳ ಬಡ್ಡಿದರಗಳ ಮೇಲೆ ಇದು ನೇರವಾಗಿ ಪ್ರಭಾವಿಸುತ್ತದೆ. ರೆಪೋ ದರ, ರಿವರ್ಸ್ ರೆಪೋ ದರ, ಎಸ್​ಎಲ್​ಆರ್ ಇತ್ಯಾದಿ ದರಗಳಲ್ಲಿ ಈ ಬಾರಿಯೂ ಯಾವುದೇ ಬದಲಾವಣೆ ಆಗುವ ಸಾಧ್ಯತೆ ಇಲ್ಲ. ಸದ್ಯ ರೆಪೋ ದರ ಶೇ. 6.5ರಷ್ಟಿದೆ.

ಆರ್​ಬಿಐನ ಅಕಾಮಡೇಟಿವ್ ಸ್ಟಾನ್ಸ್ ಎಂದರೆ ಆರ್ಥಿಕ ಪ್ರಗತಿಗೆ ಪುಷ್ಟಿ ನೀಡಲು ಅಗತ್ಯಬಿದ್ದಲ್ಲಿ ಹಣದ ಸರಬರಾಜನ್ನು ಹೆಚ್ಚಿಸಲು ಸಿದ್ಧವಿರುವುದು ಎಂದಾಗುತ್ತದೆ. ಇದನ್ನು ಹಿಂಪಡೆಯುವುದು ಎಂದರೆ ಹಣದ ಹರಿವನ್ನು ಕಡಿಮೆ ಮಾಡುವುದಾಗಿರುತ್ತದೆ. ರೆಪೋ ದರ ಏರಿಕೆ ಮಾಡದೆಯೇ ಈ ರೀತಿ ಯಾಗಿ ಹಣದುಬ್ಬರ ನಿಯಂತ್ರಿಸಲು ಆರ್​ಬಿಐ ಕ್ರಮ ಕೈಗೊಳ್ಳಲು ಮುಂದಾಗಿದೆ.

ಭಾರತೀಯ ರಿಸರ್ವ್ ಬ್ಯಾಂಕ್​ನ ಹಣಕಾಸು ನೀತಿ ಸಮಿತಿಯಲ್ಲಿ ಆರು ಮಂದಿ ಸದಸ್ಯರಿರುತ್ತಾರೆ. ಆರ್​ಬಿಐ ಗವರ್ನರ್ ಶಕ್ತಿಕಾಂತ ದಾಸ್ ಈ ಸಮಿತಿ ಮುಖ್ಯಸ್ಥರಾಗಿರುತ್ತಾರೆ.

ಆರು ಮಂದಿ ಎಂಪಿಸಿ ಸದಸ್ಯರ ವಿವರ

  1. ಶಕ್ತಿಕಾಂತ ದಾಸ್, ಆರ್​ಬಿಐ ಗವರ್ನರ್
  2. ಮೈಕೇಲ್ ದೇಬ್ರತಾ ಪಾತ್ರ, ಆರ್​​ಬಿಐ ಡೆಪ್ಯುಟಿ ಗವರ್ನರ್
  3. ರಾಜೀವ್ ರಂಜನ್, ಆರ್​ಬಿಐ ಮಾನಿಟರಿ ಪಾಲಿಸಿ ಮುಖ್ಯಸ್ಥರು
  4. ಆಶಿಮಾ ಗೋಯಲ್, ಪ್ರಧಾನಿ ಮೋದಿ ಆರ್ಥಿಕ ಸಲಹಾ ಮಂಡಳಿ ಸದಸ್‌ಎ
  5. ಶಶಾಂಕ ಭಿಡೆ, ನ್ಯಾಷನಲ್ ಕೌನ್ಸಿಲ್ ಫಾರ್ ಅಪ್ಲೈಡ್ ಎಕನಾಮಿಕ್ ರಿಸರ್ಚ್​ನಲ್ಲಿ ಹಿರಿಯ ಸಲಹೆಗಾರರು
  6. ಜಯಂತ್ ವರ್ಮಾ, ಅಹ್ಮದಾಬಾದ್ ಐಐಎಂನ ಫೈನಾನ್ಸ್ ಮತ್ತು ಅಕೌಂಟಿಂಗ್ ಪ್ರೊಫೆಸರ್