Wednesday, 9th October 2024

Reliance Foundation: ರಿಲಯನ್ಸ್ ಫೌಂಡೇಶನ್‌ನಿಂದ ಪ್ಯಾರಾಲಿಂಪಿಕ್ಸ್ ಸಾಧಕರಿಗೆ ಗೌರವ

Reliance Foundation

ಮುಂಬೈ: ಪ್ಯಾರಿಸ್ ಒಲಿಂಪಿಕ್ಸ್ (Paris Olympics) ಮತ್ತು ಪ್ಯಾರಾಲಿಂಪಿಕ್ಸ್‌ನಲ್ಲಿ (Paralympics) ಅಮೋಘ ಸಾಧನೆ ತೋರಿದ ಭಾರತದ ಕ್ರೀಡಾಪಟುಗಳನ್ನು ರಿಲಯನ್ಸ್ ಫೌಂಡೇಶನ್‌ನ (Reliance Foundation) ಸಂಸ್ಥಾಪಕಿ ಮತ್ತು ಅಧ್ಯಕ್ಷೆ ನೀತಾ ಎಂ. ಅಂಬಾನಿ (Nita M Ambani) ಅವರು, ಮುಂಬೈನ ಆಂಟಿಲಿಯಾದಲ್ಲಿ ಭಾನುವಾರ ರಾತ್ರಿ ಗೌರವಿಸಿದರು. ಪ್ಯಾರಿಸ್ ಒಲಿಂಪಿಕ್ಸ್ ಮತ್ತು ಪ್ಯಾರಾಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಿದ ಭಾರತದ ಸುಮಾರು 140 ಕ್ರೀಡಾಪಟುಗಳು ಮೊದಲ ಬಾರಿಗೆ ಒಂದೇ ವೇದಿಕೆಯಡಿ ಒಗ್ಗೂಡಿದರು ಮತ್ತು ತಮ್ಮ ಸಾಧನೆಗಳನ್ನು ಸಂಭ್ರಮಿಸಿದರು. ವಿವಿಧ ಕ್ರೀಡಾಸ್ಪರ್ಧೆಗಳಲ್ಲಿ ಭಾಗವಹಿಸಿದ ಕ್ರೀಡಾಪಟುಗಳ ಕಠಿಣ ಪರಿಶ್ರಮ, ಬದ್ಧತೆ, ದೃಢಸಂಕಲ್ಪ ಮತ್ತು ಕೊಡುಗೆಗಳನ್ನು ‘ಯುನೈಟೆಡ್ ಇನ್ ಟ್ರಿಯಂಪ್’ ಸಮಾರಂಭದಲ್ಲಿ ಶ್ಲಾಘಿಸಲಾಯಿತು.

ಒಲಿಂಪಿಕ್ಸ್ ಮತ್ತು ಪ್ಯಾರಾಲಿಂಪಿಕ್ಸ್ ಸಾಧನೆಗಳನ್ನು ಒಗ್ಗೂಡಿ ಸಂಭ್ರಮಿಸುವ ವೇದಿಕೆಗೆ ಕ್ರೀಡಾತಾರೆಯರನ್ನು ರಿಲಯನ್ಸ್ ಫೌಂಡೇಶನ್‌ನ ಸಂಸ್ಥಾಪಕಿ ಮತ್ತು ಅಧ್ಯಕ್ಷೆ ನೀತಾ ಎಂ ಅಂಬಾನಿ ಅವರು ಸ್ವಾಗತಿಸಿದರು.

ಭಾರತದ ಒಲಿಂಪಿಯನ್‌ಗಳು ಮತ್ತು ಪ್ಯಾರಾಲಿಂಪಿಯನ್‌ಗಳನ್ನು ಒಂದುಗೂಡಿಸಿದ ಅಭೂತಪೂರ್ವ ಸಂಜೆ ಮತ್ತು ಅವರ ಯಶಸ್ಸಿನ ಬಗ್ಗೆ ಸಂತೋಷ ವ್ಯಕ್ತಪಡಿಸಿ ಮಾತನಾಡಿದ ನೀತಾ ಅಂಬಾನಿ, ‘ಇಂದು ಬಹಳ ವಿಶೇಷವಾದ ಸಂಜೆ. ಮೊದಲ ಬಾರಿಗೆ ಭಾರತದ ಎಲ್ಲ ಒಲಿಂಪಿಯನ್‌ಗಳು ಮತ್ತು ಪ್ಯಾರಾಲಿಂಪಿಯನ್‌ಗಳು ಒಂದೇ ವೇದಿಕೆಯಲ್ಲಿ ಸೇರಿದ್ದಾರೆ. ಅವರಲ್ಲಿ ಪ್ರತಿಯೊಬ್ಬರ ಬಗ್ಗೆ ನಮಗೆ ತುಂಬಾ ಹೆಮ್ಮೆ ಇದೆ. ಇಂದು ನಾವು ಅವರನ್ನು ಗೌರವಿಸಿದ್ದೇವೆ ಮತ್ತು ಅವರಲ್ಲಿ ಪ್ರತಿಯೊಬ್ಬರ ಬಗ್ಗೆ ನಮಗಿರುವ ಪ್ರೀತಿ ಮತ್ತು ಗೌರವವನ್ನು ತೋರಿಸಿದ್ದೇವೆ’ ಎಂದರು. ನೀತಾ ಅಂಬಾನಿ ಅವರು ಅಂತಾರಾಷ್ಟ್ರೀಯ ಒಲಿಂಪಿಕ್ ಸಂಸ್ಥೆಯ (ಐಒಸಿ) ಸದಸ್ಯೆಯೂ ಆಗಿದ್ದಾರೆ.

ಪ್ಯಾರಿಸ್ ಒಲಿಂಪಿಕ್ಸ್ ಪದಕ ವಿಜೇತರಾದ ನೀರಜ್ ಚೋಪ್ರಾ, ಮನು ಭಾಕರ್, ಪಿಆರ್ ಶ್ರೀಜೇಶ್, ಪ್ಯಾರಾಲಿಂಪಿಕ್ಸ್ ಪದಕ ವಿಜೇತರಾದ ನವದೀಪ್ ಸಿಂಗ್, ಮೋನಾ ಅಗರ್ವಾಲ್, ಸುಮಿತ್ ಆಂತಿಲ್, ನಿತೇಶ್ ಕುಮಾರ್ ಮುಂತಾದ ಕ್ರೀಡಾತಾರೆಯರು ಸಮಾರಂಭದಲ್ಲಿ ಭಾಗವಹಿಸಿದ್ದರು.‌

ಈ ಸುದ್ದಿಯನ್ನೂ ಓದಿ | Small Savings Schemes : ಸಣ್ಣ ಉಳಿತಾಯದ ಬಡ್ಡಿ; ಸರ್ಕಾರದ ಹೊಸ ನಿರ್ಧಾರವೇನು?

ಪ್ಯಾರಿಸ್ ಒಲಿಂಪಿಕ್ಸ್ ಸಮಯದಲ್ಲಿ ರಿಲಯನ್ಸ್ ಫೌಂಡೇಶನ್ ವತಿಯಿಂದ ಪ್ಯಾರಿಸ್‌ನಲ್ಲಿ ‘ಇಂಡಿಯಾ ಹೌಸ್’ ನಿರ್ಮಾಣ ಮಾಡಿ, ಭಾರತೀಯ ಕ್ರೀಡಾಪಟುಗಳಿಗೆ ತವರಿನ ವಾತಾವರಣವನ್ನು ಒದಗಿಸಲಾಗಿತ್ತು.