Wednesday, 11th December 2024

Reliance Jio: ರಿಲಯನ್ಸ್ ಜಿಯೊ ವಾರ್ಷಿಕೋತ್ಸವ ಆಫರ್; ಆಯ್ದ ರೀಚಾರ್ಜ್‌ ಮೇಲೆ 700 ರೂ. ಮೌಲ್ಯದ ಬೆನಿಫಿಟ್‌

Reliance Jio

ನವದೆಹಲಿ: ರಿಲಯನ್ಸ್ ಜಿಯೋ (Reliance Jio) 8ನೇ ವಾರ್ಷಿಕೋತ್ಸವದಂದು ತನ್ನ ಬಳಕೆದಾರರಿಗೆ ವಾರ್ಷಿಕೋತ್ಸವದ ಆಫರ್ ಘೋಷಿಸಿದೆ. ಆಯ್ದ ರೀಚಾರ್ಜ್ ಪ್ಲಾನ್‌ಗಳ (Recharge Plans) ಮೇಲೆ ಈ ವಿಶೇಷ ಕೊಡುಗೆಯನ್ನು ಪಡೆಯಬಹುದಾಗಿದ್ದು, ರೂ. 899 ಮತ್ತು ರೂ. 999ರ ತ್ರೈಮಾಸಿಕ ಪ್ಲಾನ್‌ಗಳು ಮತ್ತು ರೂ. 3599ರ ವಾರ್ಷಿಕ ಪ್ಲಾನ್ ಜತೆಗೆ ಬಳಕೆದಾರರು ರೂ. 700 ಮೌಲ್ಯದ ಬೆನಿಫಿಟ್‌ಗಳನ್ನು ಪಡೆಯುತ್ತಾರೆ.

ಈ ಆಫರ್ ರೂ. 175 ರ ಮೌಲ್ಯದ 10 ಒಟಿಟಿ ಅಪ್ಲಿಕೇಷನ್‌ಗಳಿಗೆ ಚಂದಾದಾರಿಕೆಯೊಂದಿಗೆ 10 ಜಿಬಿ ಡೇಟಾ ಪ್ಯಾಕ್ ಅನ್ನು ಒಳಗೊಂಡಿರುತ್ತದೆ. ಇದರ ವ್ಯಾಲಿಡಿಟಿ 28 ದಿನಗಳಾಗಿರುತ್ತದೆ. ಅಲ್ಲದೇ ಝೊಮ್ಯಾಟೊದ 3 ತಿಂಗಳ ಗೋಲ್ಡ್ ಸದಸ್ಯತ್ವವನ್ನು ಉಚಿತವಾಗಿ ನೀಡಲಾಗುವುದು. ರೂ. 2999 ಕ್ಕಿಂತ ಹೆಚ್ಚಿನ ಖರೀದಿಗಳಲ್ಲಿ ಗ್ರಾಹಕರು ರೂ. 500 ಮೌಲ್ಯದ ಅಜಿಯೋ ವೋಚರ್‌ಗಳನ್ನು ಸಹ ಪಡೆಯುತ್ತಾರೆ. ಸೆಪ್ಟೆಂಬರ್ 5 ರಿಂದ 10ನೇ ತಾರೀಕಿನ ಮಧ್ಯೆ ರೀಚಾರ್ಜ್ ಮಾಡುವ ಚಂದಾದಾರರಿಗೆ ಮಾತ್ರ ಆಫರ್ ಲಭ್ಯವಿದೆ.

ಈ ಸುದ್ದಿಯನ್ನೂ ಓದಿ | Hindu Janajagruti Samiti: ಸಂಘಟಿತ ಶಕ್ತಿ ಒಂದಾದಲ್ಲಿ ಅರ್ಬನ್ ನಕ್ಸಲ್‌ವಾದದ ವಿರುದ್ಧ ಜಯ ನಿಶ್ಚಿತ: ಚಕ್ರವರ್ತಿ ಸೂಲಿಬೆಲೆ

ಜಿಯೋ ಆರಂಭವಾಗಿ 8 ವರ್ಷಗಳಾಗಿವೆ. ಈ 8 ವರ್ಷಗಳಲ್ಲಿ ವೈರ್‌ಲೆಸ್ ಮತ್ತು ವೈರ್‌ಲೈನ್ ವಿಭಾಗ ಎರಡರಲ್ಲೂ ಮಾರುಕಟ್ಟೆ ನಾಯಕನಾಗಿ ಹೊರಹೊಮ್ಮಿದೆ. ಇಂದಿಗೆ ಜಿಯೋ 13 ಕೋಟಿ 5ಜಿ ಗ್ರಾಹಕರು ಸೇರಿದಂತೆ 49 ಕೋಟಿಗೂ ಹೆಚ್ಚು ಚಂದಾದಾರರನ್ನು ಹೊಂದಿದೆ. ಜಿಯೋ ವಿಶ್ವದ ಅತಿ ದೊಡ್ಡ ಮತ್ತು ವೇಗವಾದ ಸ್ಟ್ಯಾಂಡ್-ಅಲೋನ್ 5ಜಿ ನೆಟ್‌ವರ್ಕ್ ತಂದಿದ್ದು, ದೇಶದಲ್ಲಿ ಸ್ಥಾಪಿಸಲಾದ ಎಲ್ಲ 5ಜಿ ಬಿಟಿಎಸ್‌ಗಳಲ್ಲಿ ಶೇ 85 ಕ್ಕಿಂತ ಹೆಚ್ಚು ಜಿಯೋದಿಂದ ಬಂದಿದೆ.