Saturday, 14th December 2024

ರಿಮೋಟ್ ವೋಟಿಂಗ್ ಮೆಷಿನ್: ನಾಳೆ ಎಲ್ಲಾ ಪಕ್ಷಗಳ ಸಭೆ

ವದೆಹಲಿ: ರಿಮೋಟ್ ವೋಟಿಂಗ್ ಮೆಷಿನ್ ಕುರಿತು ಚರ್ಚಿಸಲು ಮತ್ತು ಪ್ರದರ್ಶಿಸಲು ಚುನಾವಣಾ ಆಯೋಗದಿಂದ ನಾಳೆ ಎಲ್ಲಾ ರಾಷ್ಟ್ರೀಯ ಪಕ್ಷಗಳ ಅಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿಗಳ ಸಭೆ ಕರೆಯಲಾಗಿದೆ.

ತಾಂತ್ರಿಕ ತಜ್ಞರ ಸಮಿತಿಯ ಸದಸ್ಯರು ಸಭೆಯಲ್ಲಿ ಉಪಸ್ಥಿತರಿರುತ್ತಾರೆ.

ಬಳಕೆಯಲ್ಲಿರುವ ಇವಿಎಂಗಳ ಎಲ್ಲಾ ಭದ್ರತಾ ವೈಶಿಷ್ಟ್ಯಗಳನ್ನು ಉಳಿಸಿ ಕೊಳ್ಳುವ ಬಹು-ವಿಭಾಗದ ವಿದ್ಯುನ್ಮಾನ ಮತಯಂತ್ರ ಬಳಸಿಕೊಂಡು ದೇಶೀಯ ವಲಸಿಗರಿಗೆ ‘ರಿಮೋಟ್ ವೋಟಿಂಗ್’ ಅನ್ನು ಪರಿಚಯಿಸಲು ಚುನಾವಣಾ ಸಂಸ್ಥೆ ಪ್ರಸ್ತಾಪಿಸಿದೆ.

EVM ನ ಈ ಮಾರ್ಪಡಿಸಿದ ರೂಪವು ಒಂದೇ ದೂರದ ಮತಗಟ್ಟೆಯಿಂದ 72 ಬಹು ಕ್ಷೇತ್ರಗಳನ್ನು ನಿರ್ವಹಿಸಬಲ್ಲದು.

ಮತದಾನದ ವಿಧಾನದಲ್ಲಿ ಅಗತ್ಯವಿರುವ ಬದಲಾವಣೆಗಳು ಸೇರಿದಂತೆ ವಿವಿಧ ಸಂಬಂಧಿತ ವಿಷಯಗಳ ಕುರಿತು ಜನವರಿ 31 ರೊಳಗೆ ಮಾನ್ಯತೆ ಪಡೆದ ರಾಜಕೀಯ ಪಕ್ಷಗಳ ಲಿಖಿತ ಅಭಿಪ್ರಾಯಗಳನ್ನು ಚುನಾವಣಾ ಆಯೋಗ ಕೇಳಿದೆ.