Wednesday, 11th December 2024

ರೆಪೋ ದರ ಹೆಚ್ಚಳ: ಇಕ್ವಿಟಿ ಷೇರುಗಳ ಮೌಲ್ಯ ತೀವ್ರ ಕುಸಿತ

ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ ಪ್ರಮುಖ ಬಡ್ಡಿ ದರದಲ್ಲಿ ಹೆಚ್ಚಳ ಘೋಷಿಸಿದ ಬೆನ್ನಲ್ಲೇ ಷೇರುಮಾರುಕಟ್ಟೆಯಲ್ಲಿ ತೀವ್ರ ಕುಸಿತ ಕಂಡುಬಂದಿದೆ.

ನೂತನ ರೆಪೋ ದರ ಘೋಷಣೆ ಬೆನ್ನಲ್ಲೇ ಭಾರತೀಯ ಇಕ್ವಿಟಿ ಷೇರುಗಳ ಮೌಲ್ಯ ತೀವ್ರವಾಗಿ ಕುಸಿದಿದ್ದು, ಬಿಎಸ್ ಇ ಸೆನ್ಸೆಕ್ಸ್ 1,419 ಅಂಕಗಳು ಕುಸಿದು 55,557 ಕ್ಕೆ ತಲುಪಿದೆ. ಎನ್‌ಎಸ್‌ಇ ನಿಫ್ಟಿ 429 ಅಂಕಗಳ ಕುಸಿತದೊಂದಿಗೆ 16,640 ಅಂಕಗಳಿಗೆ ತಲುಪಿದೆ.

ಪ್ರಮುಖವಾಗಿ ನಿಫ್ಟಿ ಕನ್ಸ್ಯೂಮರ್ ಡ್ಯೂರಬಲ್ಸ್ ಮತ್ತು ನಿಫ್ಟಿ ಫೈನಾನ್ಶಿಯಲ್ ಸರ್ವೀಸಸ್ ಅನುಕ್ರಮವಾಗಿ ಶೇಕಡಾ 3.19 ಮತ್ತು 2.32 ರಷ್ಟು ಕುಸಿತ ದಾಖಲಿಸಿವೆ. ಅಪೊಲೊ ಹಾಸ್ಪಿಟಲ್ಸ್ ಸಂಸ್ಥೆ ಷೇರುಗಳ ಮೌಲ್ಯದಲ್ಲಿ ಶೇ. 6.4ರಷ್ಟು ಕುಸಿದಿದ್ದು, ಪ್ರತೀ ಷೇರಿನ ಬೆಲೆ 4,027.95ರೂಗೆ ಕುಸಿದಿದೆ. ಅದಾನಿ ಪೋರ್ಟ್ಸ್, ಬಜಾಜ್ ಫಿನ್‌ಸರ್ವ್, ಬಜಾಜ್ ಫೈನಾನ್ಸ್ ಮತ್ತು ಹಿಂಡಾಲ್ಕೊ ಸಂಸ್ಥೆಗಳೂ ಕೂಡ ನಷ್ಟ ದಾಖಲಿಸಿವೆ.

ಪವರ್‌ಗ್ರಿಡ್, ಎನ್‌ಟಿಪಿಸಿ, ಇನ್ಫೋಸಿಸ್, ವಿಪ್ರೋ, ಕೋಟಕ್ ಮಹೀಂದ್ರಾ ಬ್ಯಾಂಕ್ ಮತ್ತು ಇನ್ಫೋಸಿಸ್ ಷೇರುಗಳ ಮೌಲ್ಯದಲ್ಲಿ ಏರಿಕೆ ಕಂಡುಬಂದಿದೆ.